2ನೇ ಅವಧಿಗೆ ಗ್ರಾ.ಪಂ.ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಸಭೆ
ಶಿವಮೊಗ್ಗ : ಜಿಲ್ಲೆಯ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಾನೆ ನಡೆದಿರುವ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸಲು ಎಲ್ಲಾ ಏಳು ತಾಲೂಕುಗಳ ಕೇಂದ್ರಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯನ್ನು ನಿಗಧಿಪಡಿಸಿ ಜಿಲ್ಲಾಧಿಕಾರಿಗಳು ದಿನಾಂಕಗಳನ್ನು ಪ್ರಕಟಿಸಿರುತ್ತಾರೆ.

ಜೂ.19 ರಂದು ಬೆ. 10.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ತಾಲೂಕು ಸಭೆ, 20 ರಂದು ಬೆ.10.30ಕ್ಕೆ ತೀರ್ಥಹಳ್ಳಿ ಗೋಪಾಲಗೌಡ ರಂಗಮಂದಿರದಲ್ಲಿ ತೀರ್ಥಹಳ್ಳಿ ತಾಲೂಕು ಸಭೆ ಮತ್ತು ಮಧ್ಯಾಹ್ನ 3.00ಕ್ಕೆ ಹೊಸನಗರ ಐ.ಬಿ.ರಸ್ತೆಯಲ್ಲಿರುವ ವಿದ್ಯಾಸಂಘ ರಂಗಮಂದಿರದಲ್ಲಿ ಹೊಸನಗರ ತಾಲೂಕು ಸಭೆ, ಜೂ. 21 ರಂದು ಬೆ. 10.30ಕ್ಕೆ ಭದ್ರಾವತಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಭದ್ರಾವತಿ ತಾಲೂಕು ಸಭೆ, 22 ರಂದು ಬೆ. 10.30ಕ್ಕೆ ಶಿಕಾರಿಪುರ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿಕಾರಿಪುರ ತಾಲೂಕು ಸಭೆ, 23 ರಂದು ಬೆ. 10.30ಕ್ಕೆ ಸೊರಬ ಶ್ರೀರಂಗ ಕನ್ವೆಂಷನ್ ಹಾಲ್‍ನಲ್ಲಿ ಸೊರಬ ತಾಲೂಕು ಸಭೆ ಹಾಗು ಅಂದು ಮಧ್ಯಾಹ್ನ 3.00ಕ್ಕೆ ಸಾಗರ ಎಲ್.ಬಿ.ಕಾಲೇಜು ಸಭಾಂಗಣದಲ್ಲಿ ಸಾಗರ ತಾಲೂಕು ಸಭೆಯನ್ನು ಏರ್ಪಡಿಸಲಾಗಿದ್ದು, ನಿಗದಿತ ದಿನಾಂಕಗಳಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ನಿಗದಿಪಿಡಿಸುವ ಪ್ರಕ್ರಿಯೆಗೆ ಹಾಜರಿರುವಂತೆ ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾ.ಪಂ.ಗಳ ಚುನಾಯಿತರಾದ ಹಾಗೂ ಅವಧಿ ಮುಕ್ತಾಯಗೊಳ್ಳದೇ ಇರುವ ಗ್ರಾ.ಪಂ.ಗಳ ಚುನಾಯಿತ ಸದಸ್ಯರುಗಳು ಹಾಜರಿರುವಂತೆ ತಿಳಿಸಿದೆ.