68ನೇ ಅದ್ದೂರಿ ಕನ್ನಡ ರಾಜ್ಯೋತ್ಸವ | ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಶಂಕರನಾಗ್ ಹುಟ್ಟುಹಬ್ಬ ಆಚರಣೆ

0 157

ರಿಪ್ಪನ್‌ಪೇಟೆ: ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಸಂಘದವರು 68ನೇ ಕನ್ನಡ ರಾಜ್ಯೋತ್ಸವ ಮತ್ತು ಚಿತ್ರನಟ ದಿ|| ಶಂಕರನಾಗ್ ಜನ್ಮದಿನವನ್ನು ಆದ್ದೂರಿಯಾಗಿ ಆಚರಿಸಿದರು.

ಅರಸಾಳು ಗ್ರಾಮದಲ್ಲಿನ ಕನ್ನಡ ಸಂಘದ ಆಧ್ಯಕ್ಷ ಲೋಕೇಶ್ ಕನ್ನಡ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳೊಂದಿಗೆ ಕನ್ನಡ ಭುವನೇಶ್ವರಿ ವಿದ್ಯಾರ್ಥಿಗಳಿಂದ ವಿವಿಧ ವೇಷಭೂಷಣ ಭವ್ಯ ಮೆರವಣಿಗೆಯೊಂದಿಗೆ ರೈಲ್ವೆ ನಿಲ್ದಾಣದಲ್ಲಿನ ಮಾಲ್ಗುಡಿ ಮ್ಯೂಸಿಯಂ ಬಳಿ ದಿ|| ಶಂಕರನಾಗ್ ಭಾವಚಿತ್ರವನ್ನಿಟ್ಟು ಪುಷ್ಪನಮನದ ಮೂಲಕ ಕೇಕ್ ಕತ್ತರಿಸಿ ಜನ್ಮದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯ್ತಿ ಸದಸ್ಯ ಅರುಣ್, ಕನ್ನಡ ಸಂಘದ ಅಧ್ಯಕ್ಷ ಲೋಕೇಶ್, ಶಂಕರನಾಗ್ ಅಭಿಮಾನಿ ಬಳಗದ ಸತೀಶ್‌ಹೆಗಡೆ, ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕಿ ನಾಗರತ್ನ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಗಾಯಿತ್ರಿ, ಸದಸ್ಯೆ ಕುಸುಮಾ, ವಿಜಯಲಕ್ಷ್ಮಿ ಲಕ್ಷ್ಮಣರಾವ್, ರವಿ, ಎನ್.ನಾಗೇಂದ್ರ, ರಾಜಾಜೀರಾವ್, ಸುರೇಶ್‌ಶೆಟ್ಟಿ, ಸುಮಿತ್ರ, ಸೌಮ್ಯ, ನಾಗರತ್ನ, ಎನ್.ದಿನೇಶ್, ಜಯರಾಜ್‌ ಅರಸಾಳು ಹಾಗೂ ಶಿಕ್ಷಕ ಗಂಗಾಧರ ಮತ್ತು ತಿಮ್ಮಪ್ಪ, ರೈಲ್ವೆ ನಿಲ್ದಾಣದ ಟಿಕೆಟ್ ವಿತರಕ ಗೋಪಿನಾಥ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!