7 ದಿನಗಳ ದೃಢಬಲ ಆಯುರ್ವೇದ ವಸತಿ ಶಿಬಿರದ ಸಮಾರೋಪ ಸಮಾರಂಭ | “ಆಯುರ್ವೇದ ವೈದ್ಯ ಪದ್ಧತಿಗೆ ಹೊಸ ಸ್ಪರ್ಶ ನೀಡಿ” – ಹೊಂಬುಜ ಶ್ರೀಗಳು

0 57

ರಿಪ್ಪನ್‌ಪೇಟೆ : “ಪ್ರಾಚೀನ ಕಾಲದ ಆರೋಗ್ಯ ರಕ್ಷಣೆಯ ವೈದ್ಯ ಪದ್ಧತಿ ಆಯುರ್ವೇದ, ಕೇವಲ ಚಿಕಿತ್ಸಾ ಪದ್ಧತಿಯಾಗದೇ ಜೀವನ ಪದ್ಧತಿಯಾಗಿದೆ. ಅನಾದಿ ಕಾಲದಿಂದ ಭಾರತೀಯ ಜನಜೀವನದ ಆರೋಗ್ಯ ರಕ್ಷಣೆ, ಮುಂಜಾಗ್ರತೆ ಕುರಿತು ವಿವರವಾದ ನಿರ್ದೇಶನ, ಚಿಕಿತ್ಸೆ ಉಲ್ಲೇಖಿಸಲಾಗಿದೆ” ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದರು.


ಅವರು ಏಳು ದಿನಗಳ ಕಾಲ ನೆರವೇರಿದ ‘ದೃಢಬಲ’ ಆಯುರ್ವೇದ ವಸತಿ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಆಯುರ್ವೇದ ವೈದ್ಯ ಪದ್ಧತಿಗೆ ಹೊಸಸ್ಪರ್ಶ ನೀಡುವಂತೆ ಹರಸಿದರು. ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿದರು.


ಆಪ್ತಾಸ್ ಆಯುರ್ವೇದ ಸಂಘಟನೆಯ ಡಾ. ಸುಶ್ರುತ ಜೈನ್, ಕೋಣಂದೂರಿನ ಡಾ. ಮುರುಳಿಧರ, ಡಾ. ಅರ್ಹಂತ್, ಡಾ. ಪ್ರತೀಕ್ ಕಾರ್ಯಕ್ರಮ ನಿರೂಪಿಸಿದರು. 100 ಆಯುರ್ವೇದ ವಿದ್ಯಾರ್ಥಿಗಳು, 30 ಆಯುರ್ವೇದ ತಜ್ಞರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಹೊಂಬುಜ ಜೈನ ಮಠದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗದುಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ದೇವೇಂದ್ರ ಹೆಚ್.ಎಸ್. ದೇವೇಂದ್ರ ಉಪಸ್ಥಿತರಿದ್ದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಭೇಟಿ
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗೌರವಾನ್ವಿತ ಜಸ್ಟೀಸ್ ವಿಜಯಕುಮಾರ ಪಾಟೀಲರವರು ತಮ್ಮ ಕುಟುಂಬಸ್ಥರೊಂದಿಗೆ ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ದರ್ಶನ ಪಡೆದರು.


ಹೊಂಬುಜದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಗೌರವಿಸಿ, ಆಶೀರ್ವದಿಸಿದರು.

Leave A Reply

Your email address will not be published.

error: Content is protected !!