766 ಸಿ ಹೆದ್ದಾರಿ ಪಕ್ಕದ ಚರಂಡಿ ಕಳಪೆ ಕಾಮಗಾರಿ | ಗ್ರಾಮಸ್ಥರ ಆಕ್ರೋಶ, ಕಾಮಗಾರಿ ಅಭಿಯಂತರರ ಇಬ್ಬಗೆ ನೀತಿಗೆ ಖಂಡನೆ

0 2,347

ಹೊಸನಗರ: ರಾಣೆಬೆನ್ನೂರು – ಬೈಂದೂರು (Ranebennuru – Byndor) ರಾಷ್ಟ್ರೀಯ ಹೆದ್ದಾರಿ 766 ಸಿ (NH 766c) ಜಯನಗರ – ಮೇಲಿನಬೆಸಿಗೆಯ ಚರಂಡಿ ಕಾಮಗಾರಿ (Work) ಸೈಟ್ ಕ್ಲಿಯರ್ ಆಗದೆ ಕಾಮಗಾರಿ ನಡೆಸುತ್ತಿದ್ದ ಅಲ್ಲದೆ ಎಲ್ಲ ಕಡೆ ಸರಿಸಮಾನವಾಗಿ ಕಾಮಗಾರಿ ನಡೆಸದೆ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುತ್ತಿರುವ ಬಗ್ಗೆ ಗ್ರಾಮಸ್ಥರು (Villagers) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ನೀತಿ ಅನುಸರಿಸದೇ ಎಲ್ಲರಿಗೂ ಸಮಾನವಾಗುವಂತ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಆಗ್ರಪಡಿಸಿದರು.

ನೀವು ಈಗ ನಡೆಸುತ್ತಿರುವ ಕಾಮಗಾರಿ ಗ್ರಾಮಸ್ಥರಲ್ಲಿ ವೈಮನಸು ಉಂಟು ಮಾಡುತ್ತದೆ. ಮೇಲಿನಬೆಸಿಗೆ ಗ್ರಾಮದ ಜನರು ಜಾತಿ, ಮತ, ಬೇಧವೆನ್ನದೆ ಒಗ್ಗೂಡಿ ತಾಲೂಕಿನಲ್ಲಿ ಮಾದರಿಯಾಗಿದ್ದಾರೆ. ಎಲ್ಲಿಂದಲೋ ಬಂದ ನೀವು ಗ್ರಾಮಸ್ಥರಲ್ಲಿ ಬೇಧ ಭಾವ ಉಂಟು ಮಾಡಬೇಡಿ ಎಂದು ಅಭಿಯಂತರರ ತಂಡಕ್ಕೆ ಮನವರಿಗೆ ಮಾಡಿದರು.

ಈ ಘಟನೆಯಿಂದ ಅಭಿಯಂತರ ತಂಡದವರು ಬಂದ ದಾರಿಗೆ ಸಂಕವಿಲ್ಲ ಎಂಬ ಹಿಂತಿರುಗಿದರು.

Leave A Reply

Your email address will not be published.

error: Content is protected !!