ಶಿವಮೊಗ್ಗ : ಜಿಲ್ಲೆಯ ಮೂವರು ಪೊಲೀಸರು 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಜನ್ ಕುಮಾರ್ ಕೆ. ಪೊಲೀಸ್ ನಿರೀಕ್ಷಕರು ದೊಡ್ಡಪೇಟೆ ಪೊಲೀಸ್ ಠಾಣೆ, ಕೆ. ಶಿವಕುಮಾರ್ ಪೊಲೀಸ್ ಉಪನಿರೀಕ್ಷಕರು ಆಗುಂಬೆ ಪೊಲೀಸ್ ಠಾಣೆ ಮತ್ತು ಜೈ ಜಗದೀಶ್ ಎಸ್, ಎ.ಹೆಚ್.ಸಿ-98 ಡಿಎಆರ್ ಶಿವಮೊಗ್ಗ ರವರುಗಳಿಗೆ ತಮ್ಮ ಉತ್ತಮ ಕರ್ತವ್ಯಕ್ಕೆ ರಾಜ್ಯ ಸರ್ಕಾರದಿಂದ ನೀಡುವ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಜಿ ಕೆ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಂಜನ್ ಕುಮಾರ್ ಕೆ, ಶಿವಕುಮಾರ್ ಕೆ ಮತ್ತು ಜೈ ಜಗದೀಶ್ ಎಸ್ ರವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.