Election Boycott |  ಲೋಕಸಭಾ ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಾಗಲು ಗ್ರಾಮಸ್ಥರು ! ಕಾರಣವೇನು ?

ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಯಡೂರು ಗ್ರಾಪಂ ವ್ಯಾಪ್ತಿಯ ಕವರಿಯ ಮಾಗಲು ಗ್ರಾಮ ಮೂಲಭೂತ ಸೌಲಭ್ಯದಿಂಸಸಹ

ದ ವಂಚಿತವಾಗಿದೆ ಎಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಈ ಮಾಗಲು ಗ್ರಾಮದಲ್ಲಿ ಸುಮಾರು ಇಪ್ಪತ್ತು ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ ಈ ಕುಟುಂಬಗಳ ಸ್ಥಿತಿ ತೀರಾ ಕಷ್ಟಕರವಾಗಿದೆ‌. ಮೂಲಭೂತ ಸೌಲಭ್ಯವಿಲ್ಲದೆ ಈಗಾಗಲೇ ನಾಲ್ಕು ಕುಟುಂಬಗಳು ವಲಸೆ ಹೋಗಿದೆ. ಸುಮಾರು 50 ವರ್ಷಗಳಿಂದ ರಸ್ತೆಗಾಗಿ ಹೋರಾಟ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ‌. ಮಳೆಗಾಲದ ಸನ್ನಿವೇಶದಲ್ಲಿ ಯಾವುದೇ ವಾಹನಗಳು ಬರಲಾಗದ ಪರಿಸ್ಥಿತಿ ಈ ಗ್ರಾಮದಲ್ಲಿ ಉಂಟಾಗಿದ್ದು, 50 ವರ್ಷಗಳಿಂದ ರಸ್ತೆಗಾಗಿ ಹೋರಾಟ ನಡೆಸಿದರೂ ಇಲ್ಲಿಯವರೆಗೆ ಏನೂ ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಲೋಕಸಭೆ, ವಿಧಾನಸಭೆ ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯತಿ ಚುನಾವಣೆಗೆ ನಿಂತವರು ಮತ ಕೇಳುವಾಗ ಮುಂದಿನ ಸಾರಿ ನಿಮ್ಮ ಮನೆಗೆ ಮತ ಕೇಳಲು ಬರುವಾಗ ರಸ್ತೆ ನಿರ್ಮಾಣವಾಗಿರುತ್ತದೆ. ಮೂಲಭೂತ ಸೌಲಭ್ಯ ನಿಮ್ಮ ಮನೆಗೆ ಮುಟ್ಟುತ್ತದೆ ಎಂದು ಮತ ಹಾಕಿಸಿಕೊಂಡು ಗೆದ್ದ ಮೇಲೆ ಈ ಗ್ರಾಮದ ಕಡೆಗೆ ಮುಖವೇ ಹಾಕುವುದಿಲ್ಲ. ಓಟು ಹಾಕಿದ ನಾವುಗಳು ಪ್ರತಿ ಚುನಾವಣೆಯಲ್ಲಿ ಕಾಗೇ ಹಾರಿಸಿಕೊಳ್ಳುವುದು ಬಿಟ್ಟರೇ ಬೇರೆ ಮಾರ್ಗವೇ ಇಲ್ಲವಾಗಿದೆ ಎಂದು ಅಲ್ಲಿನ ಗ್ರಾಮಸ್ಥರಾದ ಎಂ.ಎಂ. ಮಂಜುನಾಥ್‌ರವರು ಆರೋಪಿಸಿದ್ದಾರೆ.

ಪ್ರಧಾನಮಂತ್ರಿಗೆ ಪತ್ರ :
ನಮ್ಮ ಮಾಗಡಿ ಗ್ರಾಮದಲ್ಲಿ ಓಡಾಟ ನಡೆಸಲು ರಸ್ತೆಗಳಿಲ್ಲ ಮೂಲಭೂತ ಸೌಲಭ್ಯವನ್ನು ಎದರಿಸಿ ಜೀವನ ಸಾಗಿಸುತ್ತಿದ್ದೇವೆ ಎಂದು ಸುಮಾರು ಇಪ್ಪತ್ತು ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳಿಲ್ಲ. ಶಾಲಾ ಮಕ್ಕಳಿಗೆ ಶಾಲೆಗಳಿಗೆ ಹೋಗಲು ರಸ್ತೆಗಳಿಲ್ಲ ಎಂದು ಪ್ರಧಾನಮಂತ್ರಿಗಳಿಗೆ ಈ ಗ್ರಾಮದ ಗ್ರಾಮಸ್ಥರು ಪತ್ರ ಬರೆದಿದ್ದು ಅವರ ಗಮನಕ್ಕೂ ತರಲಾಗಿದೆ ಎಂದು ಹೇಳಲಾಗಿದ್ದು ಪ್ರಧಾನಮಂತ್ರಿಯವರಿಂದ ಸಮಂಜಸವಾದ ಉತ್ತರ ಆ ಇಲಾಖೆಗೆ ಬಂದಿದ್ದು ಆದರೆ ಸ್ಥಳೀಯ ಇಂಜಿನಿಯರ್ (ಕಾರ್ಯಾಪಾಲಕ ಪಂಚಾಯಿತ್ ಇಂಜಿನಿಯರ್ ವಿಭಾಗ ಸಾಗರ) ಇವರು ನಕಲಿ ದಾಖಲೆ ಸೃಷ್ಟಿಸಿ ಸ್ಥಳಕ್ಕೆ ಆಗಮಿಸದೇ 2 ಕೋಟಿ ರೂ. ಖರ್ಚಿನ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ ಪ್ರಧಾನಮಂತ್ರಿಯವರಿಗೆ ಕಾಗೆ ಹಾರಿಸಿದ್ದಾರೆ‌‌‌ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮತ ಕೇಳಲು ನಮ್ಮ ಗ್ರಾಮಕ್ಕೆ ಬರಬೇಡಿ
ನಮಗೆ ಮೂಲಸೌಲಭ್ಯ ನೀಡುವವರೆಗೆ ನಮ್ಮ ಗ್ರಾಮಕ್ಕೆ ಯಾವ ರಾಜಕೀಯ ನಾಯಕರು ಬರಬೇಡಿ. ಮೂಲಬೂತ ಸೌಲಭ್ಯ ನೀಡಿ ನಂತರ ಮತ ಕೇಳಲಿ ಎಂದು ಅಲ್ಲಿನ ಗ್ರಾಮದ ಮಂಜುನಾಥ್ ಹೇಳಿದ್ದು ಜೊತೆಗೆ ಮುಖ್ಯ ರಸ್ತೆಯಿಂದ ಮಾಗಡಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಲೋಕಸಭೆ ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ನಮಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಆಮೇಲೆ ನಮ್ಮಿಂದ ಮತ ಪಡೆಯಿರಿ ಎಂದು ಬ್ಯಾನರ್ ಹಾಕಲಾಗಿದ್ದು ಚುನಾವಣಾ ಆಯೋಗ ಯಾವ ರೀತಿ ಈ ಗ್ರಾಮದ ಜನರ ಮನವೋಲಿಸುತ್ತಾರೆಂದು ಕಾದು ನೋಡಬೇಕಾಗಿದೆ‌.

Malnad Times

Recent Posts

Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

6 days ago

Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

7 days ago

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

7 days ago

ಮತದಾನಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳಿಗೆ ಮತಯಂತ್ರ ಇತರ ಪರಿಕರಗಳೊಂದಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…

7 days ago

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 week ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

1 week ago