ಶಿವಮೊಗ್ಗ : ಪುಟಾಣಿ ಆನೆ ಮರಿಯೊಂದು ತಾಯಿಗೆ ಸ್ನಾನ ಮಾಡಿಸಿ ಎಂಜಾಯ್ ಮಾಡಿದ ದೃಶ್ಯ ವೈರಲ್ ಆಗಿದೆ.
ಸಕ್ರೆಬೈಲಿನಲ್ಲಿ ಆನೆ ಮರಿ ತಾಯಿಯೊಂದಿಗಿನ ಚಂದದ ಚೆಲ್ಲಾಟ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಪ್ರವಾಸಿಗರ ಕಣ್ಮನ ಸೆಳೆದಿದೆ.
ತಾಯಿ ಮೇಲೆ ಹತ್ತಿ ಕುಣಿದಾಡುತ್ತಿರುವ ಪುಟಾಣಿ ಆನೆ ಮರಿಯ ಆಟವನ್ನು ನೋಡಿ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಈ ಮರಿಗೆ ಕುಂತಿ ಹೆಸರಿನ ಆನೆ ಜನ್ಮ ನೀಡಿದ್ದು ಈ ಆನೆಮರಿಗೆ ಇನ್ನೂ ಕೂಡ ಹೆಸರು ಇಟ್ಟಿಲ್ಲ. ಹಲವು ವರ್ಷಗಳಿಂದ ಕುಂತಿ ಆನೆ ಸಕ್ರೆಬೈಲಿ ಬೀಡಾರದಲ್ಲಿದೆ.