Hosanagara | ಅಕ್ರಮ ಮರಳು ತುಂಬಿದ ಲಾರಿ ವಶಕ್ಕೆ

0 920

ಹೊಸನಗರ: ಹೊಸನಗರ ಪೊಲೀಸ್ (Hosanagara Police) ಇಲಾಖೆಯ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಸುತ್ತ (Suttha) ಗ್ರಾಮದ ಬಳಿ ಅಕ್ರಮವಾಗಿ ಮರಳು (Illegal Sand) ತುಂಬಿದ್ದ ಲಾರಿ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸುತ್ತ ಬಾಳೆಕೊಪ್ಪದ ಬಳಿ ಅಕ್ರಮವಾಗಿ ಮರಳು ಸಂಗ್ರಹಣೆ ಕಾರ್ಯ ನಡೆಸುವುದರ ಜೊತೆಗೆ ರಾತ್ರಿ ವೇಳೆಯಲ್ಲಿ ಆಕ್ರಮ ಮರಳು ಸಾಗಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದ್ದು ಶುಕ್ರವಾರ ರಾತ್ರಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಅರಳಿಕೊಪ್ಪದ ಕುಮಾರಸ್ವಾಮಿ ಎಂಬುವವರ ಮಾಲೀಕತ್ವದ ಲಾರಿ (ಕೆಎ 35 8297) ವಶಪಡಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!