Hosanagara | ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ

0 857

ಹೊಸನಗರ ; ಹೊಸನಗರ ಉಪವಿಭಾಗದಲ್ಲಿ ಅ. 13 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಮತ್ತು 33 ಕೆ.ವಿ. ಸಾಗರ-ಹೊಸನಗರ ಮಾರ್ಗ ನಿರ್ವಹಣೆ ಹಾಗೂ ಉಪವಿದ್ಯುತ್‌ ವಿತರಣಾ ಕೇಂದ್ರ ನಿರ್ವಹಣೆ ಪ್ರಯುಕ್ತ ಸಾಗರದಿಂದ ಹೊಸನಗರಕ್ಕೆ ಬಂದಿರುವ ಸಾಗರ-ಹೊಸನಗರ ವಿದ್ಯುತ್ ಮಾರ್ಗದ ಜೇನಿ, ಮಾರುತಿಪುರ, ರಾಮಚಂದ್ರಾಪುರ, ಮೇಲಿನಬೆಸಿಗೆ, ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು ಹೊಸನಗರ ಟೌನ್ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜು ವ್ಯತ್ಯಯವಾಗಲಿದೆ. ಆದ್ದರಿಂದ ಹೊಸನಗರ ಉಪವಿಭಾಗದ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಹೊಸನಗರ ಇವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

Leave A Reply

Your email address will not be published.

error: Content is protected !!