Hosanagara | ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ !

0 1,580

ಹೊಸನಗರ : ತಾಲೂಕಿನ ರಾಮಚಂದ್ರಪುರ ಗ್ರಾಮದ ಜಯನಗರ ಕಲ್ಲುಗುಡ್ಡೆಯ ನಿವಾಸಿ ಕೃಷಿಕ ಲಕ್ಷ್ಮಣ (67) ಎಂಬುವವರು ಗುರುವಾರ ರಾತ್ರಿ ತಮ್ಮ ಮಗನ ಮನೆಯ ಹಿಂಭಾಗದ ಹಳೆಯ ಶೌಚಾಲಯ ಪಕಾಸಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು (Hang) ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು – ಬಳಗ ಹೊಂದಿದ್ದು ಅವರಿಗೆ ಎರಡು ಬಾರಿ ಅಪಘಾತವಾಗಿದ್ದು ಅಧಿಕ ರಕ್ತದೊತ್ತಡ ಹಾಗು ಹೊಟ್ಟೆನೋವು ಸಮಸ್ಯೆ ಕಾಡುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave A Reply

Your email address will not be published.

error: Content is protected !!