Hosanagara | ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದಿಂದ ‘ಅಪ್ಪು’ 2ನೇ ವರ್ಷದ ಪುಣ್ಯಸ್ಮರಣೆ

0 105

ಹೊಸನಗರ : ದೇವತಾ ಮನುಷ್ಯ, ದೊಡ್ಮನೆ ದೊರೆ, ಕರುನಾಡ ರಾಜರತ್ನ, ನಗುವಿನ ಒಡೆಯ, ಪವರ್ ಸ್ಟಾರ್ ಡಾ|| ಪುನೀತ್ ರಾಜ್‍ಕುಮಾರ್ ರವರ 2ನೇ ವರ್ಷದ ಪುಣ್ಯಸ್ಮರಣೆಯನ್ನು ಭಾನುವಾರ ರಾತ್ರಿ ಭಾರಿ ಮಳೆ ಹಾಗೂ ವಿದ್ಯುತ್ ವೈಫಲ್ಯದ ನಡುವೆ ಪಟ್ಟಣದ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದವರು ಮೆಸ್ಕಾಂ ಹಾಗು ಅರಣ್ಯ ಇಲಾಖೆ ಎದುರಿನ ಡಾ || ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದಬತ್ತಿ ಬೆಳಗುವ ಮೂಲಕ ಅವರನ್ನು ಸ್ಮರಿಸಿ ಅವರ ಆದರ್ಶಗಳನ್ನು ಕೊಂಡಾಡಲಾಯಿತು.

ಇಂದಿರಾಗಾಂಧಿ ವಸತಿ ಶಾಲೆಯ ಚಂದ್ರಶೇಖರ್ ಕೆ ಪಿ ಮಾಲ್ತೇಶ್, ಅರವಿಂದ, ನಾಗರಾಜ, ಕಾಳಿಕಾಪುರ ಗಣೇಶ್, ವನಜಾಕ್ಷಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ, ಪ್ರಪಂಚದಾದ್ಯಂತದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರುವ ಅವರೊಬ್ಬ ದೇವತಾ ಮನುಷ್ಯರು ಬದುಕಿರುವವರನ್ನು ಮರೆಯುವ ಈ ಕಾಲದಲ್ಲಿ ಅಜರಾಮರವಾಗಿ ಎಲ್ಲರ ಮನಸ್ಸು ಮನೆಯಲ್ಲೂ ದೇವರಾಗಿ ಉಳಿದ ಏಕೈಕ ವ್ಯಕ್ತಿ ಪುನೀತ್ ರಾಜ್‍ಕುಮಾರ್ ರವರದ್ದಾಗಿದೆ ಎಂದರು. ಅವರ ಅಗಲಿಕೆಯ ಸುದ್ದಿ ಎಂದಿಗೂ ಮರೆಯಲಾಗದು, ಅವರ ಆದರ್ಶ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಅಪ್ಪು ಆತ್ಮಕ್ಕೆ ಚಿರಶಾಂತಿ ಕೋರಲು ಒಂದು ನಿಮಿಷ ಮೌನ ಆಚರಿಸಲಾಯಿತು.

Leave A Reply

Your email address will not be published.

error: Content is protected !!