Hosanagara | ಮನೆ ಹಾಗೂ ಎರಡು ದೇವಸ್ಥಾನಗಳ ಬೀಗ ಮುರಿದು ಕಳ್ಳತನ !
ಹೊಸನಗರ : ಜನನಿಬಿಡ ಪ್ರದೇಶವಾದ ಪಟ್ಟಣದ ಚೌಡಮ್ಮ ರಸ್ತೆಯ ಶ್ರೀ ನಾಗ ಚೌಡೇಶ್ವರಿ ಗುಡಿ ಬೀಗ ಹಾಗೂ ಹಳೆ ಸಾಗರ ರಸ್ತೆಯ ಜಿ.ವಿ ವೇಣುಗೋಪಾಲ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದ ಶಿಕ್ಷಕ ರಮೇಶ್ ಮನೆಯ ಹೊರ ಹಾಗೂ ಒಳಗಿನ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಇಂದು ಬೆಳಗಿನಜಾವ ಸಂಭವಿಸಿದ್ದು ಜನರಲ್ಲಿ ಆತಂಕ ಉಂಟು ಮಾಡಿದೆ.

ಇಲ್ಲಿ ವಿಫಲ ಯತ್ನ ನಡೆಸಿದ ಕಳ್ಳರು ಹಳೆ ಸಾಗರ ರಸ್ತೆಯ ಮಾರಿಕಾಂಬಾ ದೇವಸ್ಥಾನದ ಬೀಗ ಮುರಿದು ದೇವಸ್ಥಾನದ ಹುಂಡಿಯ ಚಿಲ್ಲರೆ ಹಣ ಬಿಟ್ಟು ನೋಟುಗಳನ್ನು ಕದ್ದೊಯ್ದ ಬಗ್ಗೆ ದೇವಸ್ಥಾನ ಸಮಿತಿಯ ಹೆಚ್.ಎನ್ ಶ್ರೀಪತಿ ರಾವ್ ಹಾಗೂ ಎನ್ ಶ್ರೀಧರ ಉಡುಪ ಪೊಲೀಸರಿಗೆ ದೂರು ನೀಡಿದ ಬಗ್ಗೆ ತಿಳಿದು ಬಂದಿದೆ.

ಕಳ್ಳತನ ಸುದ್ದಿ ತಿಳಿದಾಕ್ಷಣ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಪಿಎಸ್ಐ ಶಿವಾನಂದ ಕೋಳಿ ಸಿಬ್ಬಂದಿಗಳ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳ್ಳತನದ ಪತ್ತೆಗಾಗಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸುವುದಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಿಪಿಐ ಗುರಣ್ಣ ತಿಳಿಸಿದ್ದಾರೆ.