Hosanagara | ಮಾರಿಗುಡ್ಡ ಸಮೀಪ ಕಲ್ಲು ಗಣಿಗಾರಿಕೆ ನಡೆಸಲು ಹುನ್ನಾರ, ಅವಕಾಶ ನೀಡಿದರೆ ಉಪವಾಸ ಸತ್ಯಾಗ್ರಹ ; ಕೃಷಿಕ ರತ್ನಾಕರ್ ಎಚ್ಚರಿಕೆ

0 850

ಹೊಸನಗರ: ಹೊಸನಗರದ ಮಾರಿಗುಡ್ಡ ಸಮೀಪ ಸರ್ವೆ ನಂಬರ್ 112ರಲ್ಲಿ ಕಲ್ಲು ಗಣಿಗಾರಿಕೆ (Stone Mining) ಪುನಃ ಪ್ರಾರಂಭಿಸಿದರೆ ಹೊಸನಗರ ಟೌನ್ (Hosanagara Town) ಪಂಚಾಯತಿಯ ಜನತೆ ಹಾಗೂ ಮಾರಿಗುಡ್ಡದ ಪ್ರತಿಯೊಬ್ಬರು ತಾಲ್ಲೂಕು ಕಛೇರಿಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಮೀನಿನ ಮಾಲೀಕರಾದ ಕೃಷಿಕ ರತ್ನಾಕರ್‌ರವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಹೊಸನಗರ ತಾಲ್ಲೂಕು ಕಛೇರಿಯ ಮುಂಭಾಗ ಗ್ರೇಡ್2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಕಲ್ಲುಗಣಿಗಾರಿಕೆ ನಡೆಸುತ್ತಿರುವ ಪಕ್ಕದ ಜಮೀನಿನವರಾದ ನಾವು ರತ್ನಾಕರ ಬಿನ್ ಹಿರಿಯಣ್ಣಯ್ಯ, ನಾಗೇಂದ್ರ ಡಿ ಬಿನ್ ದಾಸಪ್ಪ, ಗೋವಿಂದರಾಜ ಬಿನ್ ನಾಗರಾಜ್, ನಾಗರಾಜ್ ಬಿನ್ ದಾಸಪ್ಪ, ಮಂಜುನಾಥ ಬಿನ್ ಗೋವಿಂದಣ್ಣ, ಗಣೇಶ ಬಿನ್ ನಾಗಣ್ಣ, ಮಂಜುನಾಥ ಹಾಗೂ ಸುತ್ತ-ಮುತ್ತ ಬಡವರು ಮನೆ ಕಟ್ಟಿಕೊಂಡು ತುಂಬಾ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗ ಹೊಸನಗರ ಪಟ್ಟಣದ ಸಮೀಪ ಸರ್ವೇ ನಂ 112 ರಲ್ಲಿ ವಿಜಯಕುಮಾರ್ ಬಿನ್ ಪುಟ್ಟಪ್ಪ ಗೌಡ ಇವರಿಗೆ ಕಲ್ಲು ಗಣಿಗಾರಿಕೆ ಮಾಡಲು ಸರ್ಕಾರದಿಂದ ಅವಕಾಶ ಮಾಡಿಕೊಟ್ಟಿರುವುದು ಗ್ರಾಮಸ್ಥರಾದ ನಮಗೆ ತುಂಬಾ ನಷ್ಟ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ. ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಸುತ್ತಾ ಮುತ್ತ ನೂರಾರು ಎಕರೆ ಜಮೀನು, ಅಡಿಕೆ ತೋಟ ಹಾಗೂ ಬಡವರ, ಮನೆಗಳಿಗೆ ಹಾನಿ ಉಂಟಾಗುತ್ತಿದೆ. ಹೊಸನಗರ ಟೌನ್‌ನಿಂದ 1 ಕಿಲೋ ಮೀಟರ್‌ಗೂ ಒಳಗೆ ಹಾಗೂ ಹೊಸನಗರದ ಮಾರಿಗುಡ್ಡದಲ್ಲಿರುವ ನ್ಯಾಯಾಲಯಕ್ಕೆ ಅರ್ಧ ಕಿಲೋ ಮೀಟರ್ ಹತ್ತಿರದಲ್ಲಿ ಕಲ್ಲು ಗಣಿಗಾರಿಕೆ ಅವಕಾಶ ಮಾಡಿಕೊಟ್ಟಿರುವುದು ಯಾವ ಮಾನದಂಡ ಆಧರಿಸಿ ಎಂಬುದೆ ಆಶ್ಚರ್ಯಚಕಿತವಾಗಿದೆ. ಏಕ ಕಾಲದಲ್ಲಿ 12 ಅಡಿ ಹೊಂಡ ತೆಗೆದು ಏಕಪಕ್ಷೀಯವಾಗಿ 50 ರಿಂದ 60 ಮದ್ದುಗಳನ್ನು ಸಿಡಿಸುತ್ತಿರುವುದೂ ಹಾಗೂ ಪ್ರತಿನಿತ್ಯ ಕಲ್ಲುಕ್ವಾರೆಯ ಜೆ.ಸಿ.ಬಿ ಯಿಂದ ಹೊರಡುವ ಶಬ್ದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದೆಯಾದರೆ ಕಲ್ಲು ಒಡೆಯಲು ಭಾರಿ ಪ್ರಮಾಣದಲ್ಲಿ ಕಲ್ಲುಕ್ವಾರೆಯ ಜೆ.ಸಿಬಿ ಯಿಂದ ಹೊರಡುವ ಶಬ್ದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕಲ್ಲು ಒಡೆಯಲು ಭಾರಿ ಪ್ರಮಾಣದಲ್ಲಿ ಬಳಸುವ ಸ್ಪೋಟಕದಿಂದ ಮನೆಗಳು ಬಿರಿ ಬಿಡುತ್ತಿದ್ದು ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಕಲ್ಲು ಬ್ಲಾಸ್ಟ್ ಮಾಡುವಾಗ ಪೂರ್ವ ಮಾಹಿತಿಯನ್ನು ನೀಡದೇ ಬ್ಲಾಸ್ಟ್ ಮಾಡುತ್ತಿರುವುದರಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಹಾಗೂ ಸಾರ್ವಜನಿಕರು ಮತ್ತು ಶಾಲಾ-ಕಾಲೇಜುಗಳಿಗೆ ನಡೆದಾಡುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಈ ಹಿಂದೆ ಮನವಿ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಭೂ ವಿಜ್ಞಾನ ಇಲಾಖೆಯವರು ಮತ್ತು ಹೊಸನಗರ ಆಗಿನ ತಹಶೀಲ್ದಾರ್ ರಾಜೀವ್ ನೇತೃತ್ವದ ತಂಡ ಕಲ್ಲುಗಣಿಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೌಖಿಕ ಆದೇಶದ ಮೇರೆಗೆ ಇಲ್ಲಿಯವರೆಗೆ ಕಲ್ಲುಗಣಿಗಾರಿಕೆ ನಿಲ್ಲಿಸಿದ್ದರು.

ಆದರೆ ಪುನಃ ಈಗ ಕಲ್ಲುಗಣಿಗಾರಿಕೆ ನಡೆಸಲು ಹೂನ್ನರ ನಡೆಸಲಾಗಿದ್ದು ಆಕಸ್ಮಾತಾಗಿ ಪುನಃ ಪ್ರಾರಂಭಿಸಿದರೆ ಹೊಸನಗರದ ಮಾರಿಗುಡ್ಡದ ಜನತೆ ಹಾಗೂ ಪಟ್ಟಣದ ನಿವಾಸಿಗಳು ಹೊಸನಗರ ತಾಲ್ಲೂಕು ಕಛೇರಿಯ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ತಾವು ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡದಂತೆ ತಡೆ ಹಿಡಿದಿರುವುದನ್ನು ಪುನ ಪ್ರಾರಂಭಿಸಿದರೆ ನಮ್ಮ ಜೀವದ ಹಂಗು ತೊರೆದು ತಾಲ್ಲೂಕು ಕಛೇರಿಯ ಮುಂಭಾಗ ಉಪವಾಸ ಧರಣಿ ನಡೆಸುವುದಾಗಿ ತಿಳಿಸಿದರು.

ಈ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಗೋವಿಂದರಾಜು, ನಾಗೇಂದ್ರ, ಕಟ್ಟೆ ರಾಘವೇಂದ್ರ, ಮಂದಾರ ವಿಠಲ, ಮಹೇಂದ್ರ, ನಾಗರಾಜ್, ಗಣೇಶ, ಮಾರಿಗುಡ್ಡ ಗಣೇಶ, ಮನು, ರಾಜು, ಚಂದ್ರಶೇಖರ ಗೌಡ, ಕುಮಾರ, ಕಟ್ಟೆ ಸುರೇಶ, ಅಕ್ಷಯ, ಗಣೇಶ ಆರ್, ವರದರಾಜ್, ರಮೇಶ, ರತ್ನಾಕರ, ಸಮರ್ಥ ಕ್ಲಿನಿಕ್ ತಿಮ್ಮಪ್ಪ, ಧರ್ಮರಾಜ್, ಡ್ರೈವರ್ ರಮೇಶ್, ಕೃಷ್ಣಮೂತಿ, ಪ್ರದೀಪ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!