Hosanagara | ಶಾಸಕರ ಮಾದರಿ ಶಾಲೆಗೆ ಡೆಸ್ಕ್ ವಿತರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

0 673


ಹೊಸನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಿದ್ದು ಮಕ್ಕಳು ಕುಳಿತುಕೊಳ್ಳುವ ಡೆಸ್ಕ್ ಸಂಖ್ಯೆ ಕಡಿಮೆ ಇದ್ದು ಈ ವಿಷಯವನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್‌ರವರು ಶಾಸಕ ಬೇಳೂರು ಗೋಪಾಲಕೃಷ್ಣರವರ ಗಮನಕ್ಕೆ ತಂದಾಗ ಶಾಸಕರು ತಮ್ಮ ಸ್ವಂತ ಹಣ ಸುಮಾರು 67,500 ರೂಪಾಯಿ ವೆಚ್ಚದಲ್ಲಿ 10 ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯಿಂದ ಶಾಸಕರಿಗೆ ಸನ್ಮಾನಿಸಲಾಯಿತು. ಶಾಸಕರಿಗೆ ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್ ಹಾಗೂ ಸದಸ್ಯರು ಮಕ್ಕಳ ಪೋಷಕರು ಮತ್ತು ಈ ಶಾಲೆಯ ಶಿಕ್ಷಕರ ವೃಂದದಿಂದ ಅಭಿನಂದನೆ ಸಲ್ಲಿಸಿದ್ದಾರೆ.

Leave A Reply

Your email address will not be published.

error: Content is protected !!