ಹೊಸನಗರ : ಪಟ್ಟಣದ ಪಾರ್ಲರ್ ಒಂದರಲ್ಲಿ ಕೆಲಸ ಮಾಡುವ ಮಹಿಳೆಗೆ ಗಣಪತಿ ದೇವಸ್ಥಾನ ರಸ್ತೆಯ ದೇವಸ್ಥಾನದ ಎದುರಿನ ಮನೆಯಲ್ಲಿ ಊಟ ಮುಗಿಸಿ ಪಾರ್ಲರ್ ಗೆ ಮರಳುತ್ತಿರುವಾಗ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಚಾಕುವಿನಿಂದ ಮಹಿಳೆ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಪಟ್ಟಣದಲ್ಲಿ ಪ್ರಥಮವಾಗಿ ಇಂತಹ ಘಟನೆ ನಡೆದಿದ್ದು ನಾಗರಿಕರಲ್ಲಿ ದಿಗ್ಭ್ರಮೆ ಉಂಟುಮಾಡಿದ್ದು, ಗಾಯಗೊಂಡ ಮಹಿಳೆ ನಾಜೀಮಾ (38) ಎಂದು ಗುರುತಿಸಲಾಗಿದೆ.
ಬೈಕ್ನಲ್ಲಿ ಬಂದ ಯುವಕರು ಬೈಕ್ ಚಾಲಕ ಹೆಲ್ಮೆಟ್ ಧರಿಸಿದ್ದು ಹಿಂಬದಿ ಸವಾರ ಮಾಸ್ಕ್ ಹಾಕಿದ್ದನೆಂದು ಗಾಯಗೊಂಡ ಮಹಿಳೆ ತಿಳಿಸಿದ್ದು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ.
ಗಾಯಾಳು ನಾಜಿಮಾ ಬುರ್ಖಾ ಧರಿಸಿದ್ದರು ಬುರ್ಖಾದ ಬಲ ತೋಳಿನ ಮೇಲ್ಭಾಗ ಚಾಕುವಿನ ಇರಿತಕ್ಕೆ ಕತ್ತರಿಸಿ ಹೋಗಿದೆ.
ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…
ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…
ರಿಪ್ಪನ್ಪೇಟೆ : ನಾಡಿದ್ದು ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಇಂದು ಭರ್ಜರಿ…