Categories: HosanagaraShivamogga

Hosanagara | ಶ್ರೀ ಧರ್ಮಸ್ಥಳ ಸಂಘದ ಆಶ್ರಯದಲ್ಲಿ ಪಾನಮುಕ್ತರ ಬೃಹತ್ ಜನಜಾಗೃತಿ ಜಾಥಾ – ನವ ಜೀವನ ಸಮಿತಿ ಸದಸ್ಯರಿಗೆ ಪುರಸ್ಕಾರ ಅಭಿನಂದನೆ

ಹೊಸನಗರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಜಿಲ್ಲಾ ಜನಜಾಗೃತಿ ವೇದಿಕೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನವ ಜೀವನ ಸಮಿತಿ ಹೊಸನಗರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ನವ ಜೀವನ ಸಮಿತಿ ಸದಸ್ಯರಿಗೆ ಪುರಸ್ಕಾರ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಎಂ.ಎಸ್ ಸಂತೋಷ್ ಹಾಗೂ ಪ್ರಧಾನ ವ್ಯವಹಾರ ನ್ಯಾಯಾಧೀಶ ಕೆ. ರವಿಕುಮಾರ್ ರವರು ಉದ್ಘಾಟಿಸಿ ಚಾಲನೆ ನೀಡಿದರು.

ಡೊಳ್ಳು ಕುಣಿತ, ಕೋಲಾಟ, ಚಂಡೇವಾದನ ವಿವಿಧ ಸಾಂಸ್ಕೃತಿಕ ಪ್ರಕಾರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದ ಕಾರ್ಯಕರ್ತರು ತಾಲೂಕು ಕಚೇರಿಗೆ ತೆರಳಿ ತಮ್ಮ ಹಕ್ಕೋತಾಯ ಮನವಿ ಸಲ್ಲಿಸಿ ನಂತರ ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ನಾರಾಯಣ ಕಾಮತ್ ರವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಸಲಾಯಿತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹ.ರು ಗಂಗಾಧರಯ್ಯ ವಿಶೇಷ ಉಪನ್ಯಾಸ ನೀಡಿ, ಸುಖ ಸಂಸಾರಕ್ಕೆ ಸುಖೀ ಜೀವನಕ್ಕೆ ಪಾನ ಮುಕ್ತರಾಗುವಂತೆ ಕರೆ ನೀಡಿದರು. ಧರ್ಮಸ್ಥಳದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿರುವ ಸಮಾಜಮುಖಿ ಕಾರ್ಯ ನಿರಂತರವಾಗಿರುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು‌

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ್ ಜೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎನ್.ಆರ್ ದೇವಾನಂದ್, ಕೊಡಚಾದ್ರಿ ಜೆಸಿಐ ಅಧ್ಯಕ್ಷ ವಕೀಲ ಮೋಹನ್ ಜಿ ಶೆಟ್ಟಿ, ಮಹಿಳಾ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ನಾಗರತ್ನ ದೇವರಾಜ್, ಜಿ ಹೆಚ್ ದೇವೇಂದ್ರ, ನಾಗರಾಜ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ರಮ್ಯಾ ಮತ್ತು ನಿಶ್ಮಿತಾ ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ ಬೇಬಿ ಸ್ವಾಗತ ಕೋರಿದರು. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸುಭಾಷ್ ವಂದಿಸಿದರು.

Malnad Times

Recent Posts

ಗೀತಾ ಶಿವರಾಜ್‌ಕುಮಾರ್ ರವರಿಗೆ ಒಂದು ಅವಕಾಶ ಕೊಡಿ ; ಸಾ.ರಾ. ಗೋವಿಂದು

ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಅವರಿಗೆ ಒಂದು ಅವಕಾಶವನ್ನು ನೀಡಬೇಕು ಎಂದು ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ…

5 hours ago

ಗೀತಾ ಗ್ರಾ.ಪಂ. ಚುನಾವಣೆ ಕೂಡ ಗೆಲ್ಲಲ್ಲ ; ಕುಮಾರ್ ಬಂಗಾರಪ್ಪ

ಶಿವಮೊಗ್ಗ : ಬಿ.ವೈ.ರಾಘವೇಂದ್ರ ಅವರು ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ…

6 hours ago

ಮೇ 07 ರಂದು ಮತ ಚಲಾಯಿಸಲು ವೇತನ ಸಹಿತ ರಜೆ

ಶಿವಮೊಗ್ಗ : ಭಾರತ ಚುನಾವಣಾ ಆಯೋಗವು ಕರ್ನಾಟಕದಲ್ಲಿ 02 ಹಂತಗಳಲ್ಲಿ ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ಶಿವಮೊಗ್ಗ ಜಿಲ್ಲಾದ್ಯಂತ ಮೇ 07…

8 hours ago

ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಚಿಕ್ಕಮಗಳೂರು: ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಸುಜೇಂದ್ರ, ಉಪಾಧ್ಯಕ್ಷರಾಗಿ ಶರತ್‌ಚಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್, ಖಜಾಂಚಿ ದೀಪಕ್,…

8 hours ago

Chikkamagaluru | ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ

ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ (ಸಂತೆ ಮೈದಾನ) ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ…

8 hours ago

ಕಾದ ಕಾವಲಿಯಂತಾದ ಮಲೆನಾಡು, ಬಿಸಿಲಿನ ಜಳಕ್ಕೆ ಜನ ಸುಸ್ತೋ ಸುಸ್ತು

ಶಿವಮೊಗ್ಗ : ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಇರಲು ಇಚ್ಛಿಸುವವರು ಇದ್ದಾರೆ.…

12 hours ago