Ripponpet | ಕರ್ನಾಟಕ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಮುನ್ನ ಬೈಕ್ ರ‍್ಯಾಲಿ
ರಿಪ್ಪನ್‌ಪೇಟೆ: ಇಲ್ಲಿನ ವರಸಿದ್ದಿವಿನಾಯಕ ಸ್ವಾಮಿಯ ಶೋಭಾಯಾತ್ರೆಯ ಮುನ್ನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯವರು ಬೈಕ್ ರ‍್ಯಾಲಿ ನಡೆಸಿದರು.
ದೇವಸ್ಥಾನದಿಂದ ಹೊರಟ ದ್ವಿಚಕ್ರ ವಾಹನಗಳ ರ‍್ಯಾಲಿಯು ವಿನಾಯಕ ವೃತ್ತದ ಮೂಲಕ ತೀರ್ಥಹಳ್ಳಿ – ಹೊಸನಗರ – ಸಾಗರ ರಸ್ತೆ ಮಾರ್ಗದ ಮೂಲಕ ಶಿವಮೊಗ್ಗ ರಸ್ತೆಯಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನಕ್ಕೆ ತಲುಪಿತು.

ಬೈಕ್ ರ‍್ಯಾಲಿಯಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ 250 ಕ್ಕೂ ಹೆಚ್ಚಿನ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.