Shivamogga | ಐವರಿಗೆ ಚಾಕು ಇರಿತ ಪ್ರಕರಣ ; 09 ಮಂದಿ ಅರೆಸ್ಟ್

0 4,148

ಶಿವಮೊಗ್ಗ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗುರುವಾರ ನಡೆದಿದ್ದ ಘರ್ಷಣೆಯಲ್ಲಿ 5 ಮಂದಿಗೆ ಚಾಕು ಇರಿದಿದ್ದ ಪ್ರಕರಣದಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ. ಪವನ್ , ಮಂಜುನಾಥ್, ಚಂದನ್,‌ ರಂಗ ನಾಥ್, ಮನೋಜ್, ಶ್ರೀನಿವಾಸ, ರಾಜಶೇಖರ್, ವಿಶ್ವನಂದನ್, ಶ್ಯಾಮ್ ರಾಬಿನ್ ಬಂಧಿತರು.


ಶಿವಮೊಗ್ಗ ನೇತಾಜಿ ಸರ್ಕಲ್‌ನಲ್ಲಿ, ಭಗತ್ ಯುವಕರ ಸಂಘದ ಹೆಸರಿನಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದು, ಸೆಪ್ಟೆಂಬರ್ 21ರಂದು ರಾತ್ರಿ ಗಣಪತಿ ಪೆಂಡಾಲ್ ನಲ್ಲಿ ಅಂಧ ಯುವಕರ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಮುಗಿದಾಗ‌ ಸ್ನೇಹಿತರ ನಡುವೆ ಜಗಳ ಆಗಿದ್ದು, ಈ ವೇಳೆ ನಡೆದ‌ ಘರ್ಷಣೆಯಲ್ಲಿ ಕಿರಣ್, ಅಭಿಷೇಕ್, ಅರುಣ್, ರಾಜು, ಅಣ್ಣಪ್ಪ ಹಾಗೂ ಕಿಶೋರ್ ಎಂಬುವವರ ಮೇಲೆ ಚಾಕುವಿನಿಂದ ಹಲೆ ಮಾಡಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು.

Leave A Reply

Your email address will not be published.

error: Content is protected !!