Shivamogga | ಕಾರು, ಆಟೋ ಮತ್ತು ಓಮ್ನಿ ನಡುವೆ ಸರಣಿ ಅಪಘಾತ

0 405

ಶಿವಮೊಗ್ಗ : ನಗರದ ಸಾಗರ ರಸ್ತೆಯಲ್ಲಿ (Sagara Road) ಸರಣಿ ಅಪಘಾತ (Serial Accident) ಸಂಭವಿಸಿರುವ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸಾಗರ ರಸ್ತೆಯ ಎಪಿಎಂಸಿ (APMC) ಗೇಟ್ ಮುಂಭಾಗ ದುರ್ಗಾಂಬ ಪೆಟ್ರೋಲ್ ಬಂಕ್ (Petrol Bunk) ಬಳಿ ಘಟನೆ ಸಂಭವಿಸಿದೆ. ಬ್ರೀಝಾ ಕಾರು, ಓಮ್ನಿ ಮತ್ತು ಆಟೋ ಮಧ್ಯೆ ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿದ ಬ್ರೀಝಾ ಕಾರು ಮುಂದೆ ಚಲಿಸುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ. ಓಮ್ನಿ ಕಾರು ಮುಂದಿದ್ದ ಆಟೋಗೆ ಢಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿದೆ.

ಘಟನೆ ಹಿನ್ನೆಲೆ ಸಾಗರ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave A Reply

Your email address will not be published.

error: Content is protected !!