ಶಿವಮೊಗ್ಗ : ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನಂತೆ. ಇಂತಹ ಖೈದಿ, ಇಂದು ಅನಾರೋಗ್ಯದಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಕಳೆದ ಒಂದು ತಿಂಗಳ ಹಿಂದೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿ ಕಲೀಂ (37) ಎಂಬಾತನಿಗೆ ಶಿಕ್ಷೆಯಾಗಿತ್ತು. ಆರೋಪಿ ಕಿಡ್ನಿ ಸಮಸ್ಯೆ, ಲೋ ಬಿಪಿಯಿಂದ ಬಳಲುತ್ತಿದ್ದನು. ನಿನ್ನೆ ವಿಚಾರಾಣಾಧೀನ ಕೈದಿ ಕಲೀಂಗೆ ಬೇಧಿ ಕಾಣಿಸಿಕೊಂಡು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದನು.
ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪ್ರತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ವಿಚಾರಾಣಾಧೀನ ಕೈದಿ ಕಲೀಂ ಸಾವನ್ನಪ್ಪಿರೋದಾಗಿ ತಿಳಿದುಬಂದಿದೆ.
ಆದರೇ ಕಲೀಂ ಸಾವಿಗೆ ಆತನ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದು, ಜೈಲಿನಲ್ಲೇ ಕೊಲೆ ಮಾಡಲಾಗಿದೆ ಎಂಬುದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆಯ ನಂತ್ರ ನಿಖರ ಮಾಹಿತಿ ತಿಳಿದು ಬರಬೇಕಿದೆ.