Shivamogga | ಜಂಬೂ ಸವಾರಿಗೆ ಬಂದು ಮರಿಗೆ ಜನ್ಮ ನೀಡಿದ ನೇತ್ರಾವತಿ
ಶಿವಮೊಗ್ಗ ; ದಸರಾ-ಜಂಬೂ ಸವಾರಿಗೆ ಬಂದ ಆನೆಯೊಂದು ಮರಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.
ನೇತ್ರಾವತಿ ಎಂಬ ಆನೆ ಶಿವಮೊಗ್ಗ ನಗರದ ವಾಸವಿ ಶಾಲೆ ಆವರಣದಲ್ಲಿ ಮರಿಯಾನೆಗೆ ಜನ್ಮ ನೀಡಿದೆ.

ನಿನ್ನೆ ರಾತ್ರಿ ವೇಳೆ ಹೆಣ್ಣು ಮರಿಗೆ ಜನ್ಮ ನೀಡದ್ದು, ಶಿವಮೊಗ್ಗದ ಜಂಬೂಸವಾರಿಗೆಂದು ನೇತ್ರಾವತಿಯನ್ನು ಕರೆತರವಾಗಿತ್ತು. ಅಂಬಾರಿ ಹೊರುವ ಸಾಗರ್ ಆನೆ ಜೊತೆಗೆ ಕುಮ್ಕಿ ಆನೆಗಳಾಗಿ ನೇತ್ರಾವತಿ ಹಾಗೂ ಹೇಮಾವತಿ ಆನೆ ತರಲಾಗಿತ್ತು.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://fb.watch/nT3BX-qI5c/?mibextid=ZbWKwL
ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಿಂದ ಕರೆತಂದಿದ್ದ ಈ ಮೂರು ಆನೆಗಳು ಕಳೆದ 4 ನಾಲ್ಕು ದಿನದಿಂದ ನಿರಂತರ ತಾಲೀಮು ನಡೆಸಿದ್ದವು. ನಿನ್ನೆ ಸಂಜೆ ಕೂಡ ತಾಲೀಮು ಪ್ರಕ್ರಿಯೆಯಲ್ಲಿ ನೇತ್ರಾವತಿ ಆನೆ ಭಾಗಿಯಾಗಿತ್ತು.
ರಾತ್ರಿ ವೇಳೆ ಏಕಾಏಕಿ ಹೆಣ್ಣು ಮರಿಗೆ ಜನ್ಮ ನೀಡಿದ್ದು ಮರಿ ಹಾಗೂ ನೇತ್ರಾವತಿ ಆನೆಯನ್ನು ಆರೈಕೆಯನ್ನು ಹೇಮಾವತಿ ಆನೆ ಮಾಡುತ್ತಿದೆ.
ಸ್ಥಳಕ್ಕೆ ಡಿಎಫ್ಓ ಪ್ರಸನ್ನ ಪಟಗಾರ್, ವನ್ಯಜೀವಿ ವೈದ್ಯ ಡಾ. ವಿನಯ್ ಭೇಟಿ ನೀಡಿದ್ದಾರೆ. ಪ್ರೆಗ್ನೆನ್ಸಿ ಟೆಸ್ಟ್ ವೇಳೆ ನೆಗೆಟಿವ್ ಕಂಡು ಬಂದಿದ್ದರಿಂದ ಜಂಬೂ ಸವಾರಿಗೆ ಆಯ್ಕೆ ಮಾಡಲಾಗಿತ್ತು.
ಮೈಸೂರು ದಸರಾಗೆ ಆನೆ ಆಯ್ಕೆ ವೇಳೆ ಸಕ್ರೇಬೈಲಿನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ನಡೆಸಲಾಗಿತ್ತು. ಶಿವಮೊಗ್ಗ ದಸರಾ ಕಾರಣಕ್ಕಾಗಿಯೇ ಮೈಸೂರು ದಸರಾಗೆ ನೇತ್ರಾವತಿ ಆನೆ ಕಳಿಸಲು ನಿರಾಕರಿಸಲಾಗಿತ್ತು. ಸದ್ಯ ನೇತ್ರಾ ಆನೆಯನ್ನು ಸಕ್ರೆಬೈಲಿನ ಆನೆ ಬಿಡಾರಕ್ಕೆ ಶಿಫ್ಟ್ ಮಾಡಲಾಗಿದೆ.
ಇನ್ನೂ ಎರಡು ಆನೆಗಳು ಮಾತ್ರ ದಸರಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ. ಸಾಗರ್ ಆನೆ ಅಂಬಾರಿ ಹೊರಲು ಬರುವುದಿಲ್ಲ ಎಂದು ತಿಳಿದುಬಂದಿದೆ. ಅಲಂಕೃತ ವಾಹನದಲ್ಲಿ ಈ ಬಾರಿ ದೇವಿಯ ಅಂಬಾರಿ ಸಾಗಲಿದೆ.