Shivamogga | ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಡಿ. ಸುಧಾಕರ್ ವಿರುದ್ಧ ಕಠಿಣ ಕೈಗೊಳ್ಳಲು ಒತ್ತಾಯ

0 104

ಶಿವಮೊಗ್ಗ: ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಡಿ. ಸುಧಾಕರ್ ವಿರುದ್ಧಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ವಿಪ್ರ ಸಂಘಟನೆಗಳ ಪ್ರಮುಖರು ಇಂದು ಜಿಲ್ಲಾಡಳಿತಕ್ಕೆ ಮನಿ ಸಲ್ಲಿಸಿದರು.


ಸಚಿವ ಡಿ. ಸುಧಾಕರ್ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಲ್ಲದೆ, ಬ್ರಾಹ್ಮಣ ಸಮುದಾಯದ ಪವಿತ್ರವಾದ ಜನಿವಾರದ ಬಗ್ಗೆ ಅತ್ಯಂತ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ. ಬ್ರಾಹ್ಮಣ ಸಮಾಜದವರನ್ನು ನಿಂದಿಸಿದ್ದಾರೆ. ಆದ್ದರಿಂದ ಅವರು ಈ ಕೂಡಲೇ ಬ್ರಾಹ್ಮಣ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.


ರಾಜ್ಯ ಸರ್ಕಾರ ಕೂಡಲೇ ಡಿ.ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.


ಈ ಸಂದರ್ಭದಲ್ಲಿ ದೀನ್‌ದಯಾಳು, ಸುರೇಶ್ ನಾಡಿಗ್,ನಾಗೇಶ್, ಕೇಶವಮೂರ್ತಿ, ರಾಜು, ವೆಂಕಟೇಶ್, ಪ್ರಭಾಕರ್, ರಾಘವೇಂದ್ರ ಉಡುಪ, ಶ್ಯಾಮ್ ಪ್ರಸಾದ್ ಮುಂತಾದವರಿದ್ದರು.

Leave A Reply

Your email address will not be published.

error: Content is protected !!