Shivamogga | ಮಕ್ಕಳಾ ದಸರಾ ಕ್ರೀಡಾಕೂಟಕ್ಕೆ ಚಾಲನೆ

0 112

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆಯ ವತಿಯಿಂದ ಮಕ್ಕಳ ದಸರಾ ಸಮಿತಿ 2023ರ ವತಿಯಿಂದ ಮಕ್ಕಳ ವಿವಿಧ ಹಂತದಲ್ಲಿ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಪ್ರಬಂಧ, ಕ್ಲೇ ಮಾಡ್ಲಿಂಗ್, ಛದ್ಮವೇಷ, ಮೆಮೋರಿ ಟೆಸ್ಟ್, ಹಾಗೂ ಮಕ್ಕಳ ಕ್ರೀಡಾಕೂಟಕ್ಕೆ ಇಂದು ಬೆಳಗ್ಗೆ ನೆಹರು ಕ್ರೀಡಾಂಗಣದಲ್ಲಿ ಮಹಾನಗರಪಾಲಿಕೆ ಮೇಯರ್ ಎಸ್.ಶಿವಕುಮಾರ್‌ರವರು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು.


ಮಕ್ಕಳ ಕಲರವ ರಂಗೇರಿದ್ದು, 500ಕ್ಕೂ ಹೆಚ್ಚು ಶಾಲಾ ಮಕ್ಕಳು ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರೊಂದಿಗೆ ಅತಿ ಉತ್ಸಾಹಕತೆಯಿಂದ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಉಪ ಮೇಯರ್ ಲಕ್ಷ್ಮಿ ಶಂಕರನಾಯಕ್, ಮಕ್ಕಳ ದಸರಾ ಸಮಿತಿಯ ಅಧ್ಯಕ್ಷೆ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ಸುನೀತಾ ಅಣ್ಣಪ್ಪ, ಧೀರರಾಜ್‌ ಹೊನ್ನವಿಲೆ, ಇ. ವಿಶ್ವಾಸ್, ಮಂಜುಳಾ ಶಿವಣ್ಣ, ಅನಿತಾ ರವಿಶಂಕರ್, ಪಾಲಿಕೆ ಅಧಿಕಾರಿ ವರ್ಗ, ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!