Shivamogga | ಮೀನು ಹಿಡಿಯಲು ಹೋದ ಇಬ್ಬರು ತುಂಗಾ ನದಿ ಪಾಲು !
ಶಿವಮೊಗ್ಗ : ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ಮೀನುಗಾರರು ನೀರುಪಾಲಾದ ಘಟನೆ ನಗರದ ಕುರುಬರ ಪಾಳ್ಯ ಬಳಿ ನಡೆದಿದೆ. ಫಯಾಜ್ ಅಹ್ಮದ್ (18), ಅಂಜುಂ ಖಾನ್ (19) ನೀರುಪಾಲಾದ ಮೀನುಗಾರರು.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ದೊಡ್ಡಪೇಟೆ ಠಾಣಾ ಪೊಲೀಸರು ನೀರುಪಾಲಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ತುಂಗಾ ನದಿ ದಂಡೆ ಮೇಲೆ ಮೊಬೈಲ್ ಹಾಗೂ ಬಟ್ಟೆಗಳು ಪತ್ತೆಯಾಗಿವೆ.
ಮೀನು ಹಿಡಿಯಲು ಹೋದ ವೇಳೆ ಯುವಕರು ನೀರು ಪಾಲಾಗಿದ್ದಾರೆ. ಸದ್ಯ ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಕಾರ್ಯ ನಡೆಸುತ್ತಿದ್ದಾರೆ.