Shivamogga | ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

0 9


ಶಿವಮೊಗ್ಗ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ.17 ರಂದು ಶಿವಮೊಗ್ಗ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.


ಅಂದು ಬೆಳಗ್ಗೆ 11.20 ಕ್ಕೆ ಶಿಕಾರಿಪುರ ಹೆಲಿಪ್ಯಾಡ್ ತಲುಪುವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆಯ ಉದ್ಘಾಟನೆ ಹಾಗೂ ನೂತನ ಸರ್ಕಾರಿ ಬಸ್ ನಿಲ್ದಾಣದ ಉದ್ಘಾಟನೆ ಮಾಡುವರು. ಮಧ್ಯಾಹ್ನ 12.00 ಕ್ಕೆ ಶಿಕಾರಿಪುರದ ಸರ್ಕಾರಿ ಡಿಪೋ ಉದ್ಘಾಟಿಸುವರು. 12.30ಕ್ಕೆ ರಸ್ತೆಯ ಮೂಲಕ ಉಡುತಡಿ – ಉಡುಗಣಿಗೆ ತೆರಳಿ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ ಮಾಡುವರು ಹಾಗೂ ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳವನ್ನು ಉದ್ಘಾಟಿಸುವರು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ಶಂಕುಸ್ಥಾಪನೆ ಮಾಡುವರು.

ಮಧ್ಯಾಹ್ನ 2.15 ಕ್ಕೆ ಶಿಕಾರಿಪುರ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಹೊರಟು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು, ಹೆಚ್. ಕಡದಕಟ್ಟೆಗೆ ತಲುಪುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿರುತ್ತಾರೆ.

Leave A Reply

Your email address will not be published.

error: Content is protected !!