Shivamogga | ರಾಜ್ಯ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್‍ನಲ್ಲಿ ಸಂಜಯ ಸಾಧನೆ

0 415

ಶಿವಮೊಗ್ಗ : ಉಡುಪಿ (Udupi) ಜಿಲ್ಲೆಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನವೆಂಬರ್‌ನಲ್ಲಿ ನಡೆದ 14 ವರ್ಷದೊಳಗಿನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ರಾಜ್ಯ ಮಟ್ಟದ ಕ್ರೀಡಾಕೂಟದ (Sports) ಅಥ್ಲೆಟಿಕ್ (Athletic) ಸ್ಫರ್ಧೆಯಲ್ಲಿ ಶಿವಮೊಗ್ಗ (Shivamogga) ಜಿಲ್ಲಾ ಕ್ರೀಡಾ ಶಾಖೆಯ ಸಂಜಯ ಸುನೀಲ ಹಂಚಿನಮನೆ ಎಂಬ ವಿದ್ಯಾರ್ಥಿಯು (Student) 100 ಹಾಗೂ 200 ಮೀ ಓಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾನೆ.

ಈ ಕ್ರೀಡಾಪಟುವು ಇಲಾಖಾ ತರಬೇತುದಾರ ಬಾಳಪ್ಪ ಮಾನೆ ಇವರ ಬಳಿ ದೈನಂದಿನ ತರಬೇತಿ ಪಡೆಯುತ್ತಿದ್ದಾರೆ. ಸಾಧನೆ ಮಾಡಿದ ಕ್ರೀಡಾಪಟುಗೆ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ. ಹಾಗು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Leave A Reply

Your email address will not be published.

error: Content is protected !!