Shivamogga | ಸ್ಟ್ರಾಂಗ್ ರೂಂ ಸೇರಿದ ಮತ ಯಂತ್ರಗಳು ; ಪೊಲೀಸ್ ಸರ್ಪಗಾವಲು

0 40

ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಕ್ತಾಯವಾದ ಬೆನ್ನಲ್ಲೇ ಮತಯಂತ್ರಗಳನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಿಸಲಾಗಿದ್ದು, ಭದ್ರತಾ ಸರ್ಪಗಾವಲು ಹಾಕಲಾಗಿದೆ.

ಮತ ಎಣಕೆ ಕಾರ್ಯ ಸಹ್ಯಾದ್ರಿ ಕಾಲೇಜಿನಲ್ಲಿ ಮೇ 13ರಂದು ನಡೆಯಲಿದ್ದು, ಅಲ್ಲಯೇ ಸ್ಟ್ರಾಂಗ್ ರೂಂ ಸ್ಥಾಪನೆ ಮಾಡಲಾಗಿದೆ. ನಿನ್ನೆ ಸಂಜೆ ಮತದಾನ ಮುಕ್ತಾಯವಾದ ನಂತರ ಡಿಮಸ್ಟರಿಂಗ್ ಕೇಂದ್ರಗಳಿಗೆ ಯಂತ್ರಗಳನ್ನು ಕೊಂಡೊಯ್ದು, ಅಧಿಕಾರಿಗಳಿಗೆ ವಹಿಸಲಾಗಿದೆ. ಆನಂತರ ಸ್ಟ್ರಾಂಗ್ ರೂಂಗೆ ತಂದು ಕ್ಷೇತ್ರವಾರು ಜೋಡಿಸಲಾಗಿದೆ. ನಸುಕಿನವರೆಗೂ ಈ ಪ್ರಕ್ರಿಯೆ ನಡೆದಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಹೇಗಿದೆ ಗೊತ್ತಾ ಭದ್ರತಾ ವ್ಯವಸ್ಥೆ?
ಮತಯಂತ್ರಗಳನ್ನು ಇರಿಸಲಾಗಿರುವ ಕೊಠಡಿಗಳ ಬಾಗಿಲು ಹಾಗೂ ಕಿಟಕಿಗಳಿಗೆ ಫ್ಲೇವುಡ್ ಮುಚ್ಚಿ, ಮೊಳೆ ಹೊಡೆದು, ಸೀಲ್ ಮಾಡಲಾಗಿದೆ.


ಪ್ರಮುಖವಾಗಿ, ಸ್ಟ್ರಾಂಗ್ ರೂಂ ಮುಂಭಾಗ ಹಾಗೂ ಸುತ್ತಲೂ ಸಿಆರ್’ಪಿಎಫ್ ಯೋಧರು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಕಟ್ಟಡದ ಸುತ್ತಲೂ ಹದ್ದಿನ ಕಣ್ಣಿಡಲು ವಿಶೇಷ ಲೈಟ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವ್ಯಕ್ತಿಗಳು ಈ ಕಟ್ಟಡದ ಸುತ್ತಲೂ ಸುಳಿಯದಂತೆ ಹದ್ದಿನ ಕಣ್ಣಿಡಲಾಗಿದೆ.

ಜಿಲ್ಲಾ ರಕ್ಷಣಾಧಿಕಾರಿ ಭೇಟಿ
ಇನ್ನು, ಸ್ಟ್ರಾಂಗ್ ರೂಂ ಕಟ್ಟಡಕ್ಕೆ ಭೇಟಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಪರಿಶೀಲನೆ ನಡೆಸಿದರು.

Leave A Reply

Your email address will not be published.

error: Content is protected !!