Categories: Shivamogga

Shivamogga | ಸುಗಮ ಸಂಚಾರಕ್ಕೆ ವಾಹನ ನಿಲುಗಡೆ ಮತ್ತು ನಿಷೇಧ ವ್ಯವಸ್ಥೆ – ಡಿಸಿ ಆದೇಶ

ಶಿವಮೊಗ್ಗ : ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ಹೊಳೆಬಸ್ ಸ್ಟಾಪ್‍ನಿಂದ ಅಮೀರ್ ಅಹಮದ್ ಸರ್ಕಲ್‍ವರೆಗೆ ಸುಗಮ ಸಂಚಾರ ದೃಷ್ಟಿಯಿಂದ ದ್ವಿಚಕ್ರ ಮತ್ತು ಕಾರುಗಳಿಗೆ ಕೆಳಕಂಡಂತೆ ನಿಲುಗಡೆ ಮತ್ತು ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

ವಾಹನ ನಿಲುಗಡೆ ನಿಷೇಧ:

  • ಅಮೀರ್ ಅಹಮದ್ ಸರ್ಕಲ್‍ನಿಂದ ಮಹಾನಗರಪಾಲಿಕೆ ಕಾಂಪ್ಲೆಕ್ಸ್‍ವರೆಗೆ(ಕುಚಲಕ್ಕಿ ಕೇರಿ ಕ್ರಾಸ್ ಎದುರು) ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.
  • ಅಮೀರ್ ಅಹಮದ್ ಸರ್ಕಲ್‍ನಿಂದ ಶಿವಪ್ಪನಾಯಕ ಸರ್ಕಲ್ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯ ಬಲಬದಿಯ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.
  • ಸಾವರ್ಕರ್ ನಗರ ಕ್ರಾಸ್(ಡಯಟ್ ಕಾಲೇಜ್ ಕ್ರಾಸ್) ನಿಂದ ಯೂನಿಲೆಟ್ ಮಳಿಗೆವರೆಗೆ ಬಲಬದಿ ಎಲ್ಲಾ ವಿಧದ ವಾಹನಗಳು ನಿಲುಗಡೆ ನಿಷೇಧ.
  • ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಗೇಟ್‍ನಿಂದ ಮೆಡ್‍ಪ್ಲಸ್ ಮೆಡಿಕಲ್ ಶಾಪ್‍ವರೆಗೆ ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ
  • ಲೂರ್ದುನಗರ ಕ್ರಾಸ್‍ನಿಂದ ಸೇಕ್ರೆಡ್ ಹಾರ್ಟ್ ಚರ್ಚ್ 2ನೇ ಗೇಟ್‍ವರೆಗೆ ಎಡಬದಿಯಲ್ಲಿ ಎಲ್ಲ ವಿಧದ ವಾಹನಗಳ ನಿಲುಗಡೆ ನಿಷೇಧ.
  • ಕರ್ನಾಟಕ ಸಂಘ ಸಿಗ್ನಲ್ ಸರ್ಕಲ್‍ನ 50 ಮೀ ಸುತ್ತ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.

ದ್ವಿಚಕ್ರ ವಾಹನ ನಿಲುಗಡೆ:

  • ಕೋಕಿಲಾ ರೇಡಿಯೋ ಕ್ರಾಸ್‍ನಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಗೇಟ್‍ವರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ
  • ಸಂಗಮ್ ಟೈಲರ್ ಶಾಪ್‍ನಿಂದ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ
  • ಮೆಡ್‍ಪ್ಲಸ್ ಮೆಡಿಕಲ್ ಶಾಪ್‍ನಿಂದ ಅಯ್ಯ ಆರ್ಕೇಡ್(ಲೂರ್ದುನಗರ ಕ್ರಾಸ್)ವರೆಗೆ ಎಡಬದಿ ದ್ವಿಚಕ್ರಮ ವಾಹನಗಳ ನಿಲುಗಡೆ
  • ಸೇಕ್ರೆಡ್ ಹಾರ್ಟ್ ಚರ್ಚಿನಿಂದ ಕರ್ನಾಟಕ ಪಬ್ಲಿಕ್ ಶಾಲೆ ಗೇಟ್‍ವೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ.
  • ಮೀನಾಕ್ಷಿ ಭವನ ಕ್ರಾಸ್‍ನಿಂದ ಗಿರಿಯಾಸ್ ಶೋ ರೂಂವರೆಗೆ ಎಡಬದಿ ದ್ವಿಚಕ್ರಮ ವಾಹನಗಳ ನಿಲುಗಡೆ.
  • ಅರವಿಂದ್ ಮೋಟಾರ್‍ನಿಂದ ಗಣೇಶಪ್ರಸಾದ್ ಹೋಟೆಲ್ ಕ್ರಾಸ್‍ವರೆಗೆ ಬಲಬದಿ ದ್ವಿಚಕ್ರಮ ವಾಹನಗಳ ನಿಲುಗಡೆ.
  • ಹರ್ಷ ಕ್ರಾಸ್‍ನಿಂದ ಕಾಸರವಳ್ಳಿ ಕಾಂಪ್ಲೆಕ್ಸ್ ವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ

ನಾಲ್ಕು ಚಕ್ರ ವಾಹನಗಳ ನಿಲುಗಡೆ :

  • ಮಹಾನಗರಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ(ಕುಚಲಕ್ಕಿ ಕೇರಿ ಎದುರಿನಿಂದ) ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.
  • ಸುಗಮ್ ಟೈಲರ್ ಶಾಪ್‍ನಿಂದ ಡಯಟ್ ಕಾಲೇಜ್ ಕ್ರಾಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್
  • ಗಿರಿಯಾಸ್ ಶೋ ರೂಂನಿಂದ ಮಾತಾ ಮಾಂಗಲ್ಯ ಮಂದಿರ ಗೇಟ್‍ವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.
  • ನಂದನ್ ಟವರ್ ಎದುರಿನಿಂದ ಪೆನ್ಶನ್ ಮೊಹಲ್ಲಾ 2ನೇ ಕ್ರಾಸ್ ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.
  • ಪೆನ್ಶನ್ ಮೊಹಲ್ಲಾ 1ನೇ ಕ್ರಾಸ್‍ನಿಂದ ಡಿಹೆಚ್‍ಓ ಆಫೀಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.
  • ಕೃಷ್ಣ ಕೆಫೆ ಕ್ರಾಸ್‍ನಿಂದ ದೀಪಕ್ ಪೆಟ್ರೋಲ್ ಬಂಕ್ ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.
Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

3 days ago