Shivamogga Airport | ವಿಮಾನ ನಿಲ್ದಾಣ ವಿಚಾರವಾಗಿ ಇಂಡಿಗೋ ಸಂಸ್ಥೆಗೆ ವಾರ್ನಿಂಗ್ ನೀಡಿದ್ರಾ ಸಂಸದ ಬಿ.ವೈ ರಾಘವೇಂದ್ರ…?

0 47

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ತಡವಾಗಲು ಕಾರಣ ಬಯಲಾಗಿದ್ದು ಇಂಡಿಗೋ ಏರ್ ಲೈನ್ಸ್ ನ ದುರಾಸೆನೇ ವಿಳ‌ಂಬಕ್ಕೆ ಕಾರಣನಾ ? ಪ್ರಧಾನಿ ನರೇಂದ್ರ ಮೋದಿಯೇ ಬಂದು ಉದ್ಘಾಟನೆ ಮಾಡಿದರು ಯಾಕೆ ಇಷ್ಟು ತಡ‌ ? ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡತೊಡಗಿದೆ.

ಉಡಾನ್ ಯೋಜನೆ ಅಡಿಯಲ್ಲಿ ಒಂದು ವರ್ಷಕ್ಕೆ ಎರಡೂವರೆ ಕೋಟಿ ರೂ. ಸಬ್ಸಿಡಿಯನ್ನು ಘೋಷಿಸಲಾಗಿದೆ. ಈಗ ಇಂಡಿಗೋ ಸಂಸ್ಥೆ ದುರಾಸೆ ಮಾಡುತ್ತಿದೆ ಎಂದು ಕುವೆಂಪು ರಂಗಮಂದಿರದಲ್ಲಿ ನಡೆದ ನೆಹರು ಯುವ ಕೇಂದ್ರ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಎಟಿಎನ್‌ಸಿ ಕಾಲೇಜು ವತಿಯಿಂದ ಆಯೋಜಿಸಿದ್ದ ಯುವ ಉತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ : https://fb.watch/l2_dh0-wJe/?mibextid=ZbWKwL

ಇಂಡಿಗೋ ಸಂಸ್ಥೆಗೆ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ ಅವರು, ಈಗಾಗಲೆ ಇಂಡಿಗೋ ವಿಮಾನಯಾನ ಸಂಸ್ಥೆಯೊಂದಿಗೆ ಒಪ್ಪಂದವಾಗಿದೆ. ಪ್ರತಿ ಸೀಟ್‌ಗೆ 500 ರೂ. ಸಬ್ಸಿಡಿ ನೀಡಲಾಗುತ್ತಿದೆ. ಅದರಂತೆ ಒಂದು ವರ್ಷಕ್ಕೆ ಎರಡೂವರೆ ಕೋಟಿ ರೂ. ಸಬ್ಸಿಡಿಯನ್ನು ಘೋಷಿಸಲಾಗಿದೆ. ಶಿವಮೊಗ್ಗ- ಬೆಂಗಳೂರು ಮಾರ್ಗವನ್ನು ಉಡಾನ್ ಯೋಜನೆ ಅಡಿ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಸಬ್ಸಿಡಿ ಹೆಚ್ಚಳವಾಗಲಿದೆ.

ದಿನಕ್ಕೆ 45 ಸಾವಿರ ಹಣ ಸಬ್ಸಿಡಿ ನೀಡಲಾಗುತ್ತದೆ. ಇನ್ನೂ ಒಂದೆರಡು ಕೋಟಿ ರೂ. ಸಬ್ಸಿಡಿ ಸಿಗಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದೆ. ಆದರೆ ರಾಜಧಾನಿಗಳಿಗೆ ಉಡಾನ್ ಯೋಜನೆ ನೀಡುವುದಿಲ್ಲ. ವಿಮಾನ ಹಾರಾಟ ತಕ್ಷಣದಿಂದ ಆರಂಭವಾಗಬೇಕು ಎಂದು ಈಗಾಗಲೆ ವಾರ್ನಿಂಗ್ ನೀಡಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

Leave A Reply

Your email address will not be published.

error: Content is protected !!