Shivamogga | B.Y Raghavendra | BJP | ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಮತ ಪಡೆದು ಗೆಲುವು ಸಾಧಿಸಲಿದೆ ; ಬಿವೈಆರ್

0 0

ಶಿವಮೊಗ್ಗ : ಬೈಂದೂರು ಕ್ಷೇತ್ರ ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಅವರು ಇಂದು ನಗರದ ಕುವೆಂಪು ರಸ್ತೆಯಲ್ಲಿ ಬಿಜೆಪಿ ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ಪಾರ್ಟಿಯಲ್ಲ. ಕಳೆದ ಐದು ವರ್ಷಗಳಿಂದ ಕಾರ್ಯಕರ್ತರ ತಪಸ್ಸಿನ ಸಂಘಟನೆಯ ಫಲವಿದೆ. ಪರಿಶ್ರಮವಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಹಾಗಾಗಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಪ್ರಧಾನಿ ಮೋದಿಯವರ ಬಂಡೀಪುರ ಭೇಟಿಗೆ ಸಂಬಂಧಿಸಿದಂತೆ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ವಿಪಕ್ಷಗಳು ಅಪಪ್ರಚಾರ ಮಾಡುತ್ತಾ ಬಂದಿವೆ. ಪ್ರಚಾರಕ್ಕೆ ಬೇರೆ ಯಾವುದೇ ವಿಷಯಗಳಿಲ್ಲ. ಇಟಲಿ ದೇಶದ ಗ್ಲಾಸ್ ಹಾಕಿ ನೋಡುವವರಿಗೆ ಎಲ್ಲವೂ ತಪ್ಪಾಗಿಯೇ ಕಾಣುತ್ತದೆ. ಹೀಗೆಯೇ ಟೀಕೆ ಮುಂದುವರಿಸಿದರೆ ಅವರಿಗೆ ವಿಪಕ್ಷ ಸ್ಥಾನವೂ ಸಿಗುವುದಿಲ್ಲ ಎಂದರು.

ಶಿಕಾರಿಪುರ ಮತದಾರರ ಮತ್ತು ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಪಕ್ಷ ಅವಕಾಶ ನೀಡಿದಲ್ಲಿ ವಿಜಯೇಂದ್ರ ಅವರು ಸ್ಪರ್ಧಿಸುತ್ತಾರೆ. ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ. ಈ ಬಗ್ಗೆ ಸಂಶಯ ಬೇಡ ಎಂದ ಅವರು, ಶಾಸಕ ಆಯನೂರು ಮಂಜುನಾಥ್ ಅವರು ಪಕ್ಷಕ್ಕೆ ರೆಬೆಲ್ ಆಗಿದ್ದಾರೆಯೇ ಎಂಬ ಪ್ರಶ್ನೆಗೆ ಸೂಕ್ತ ಸಂದರ್ಭದಲ್ಲಿ ಪಕ್ಷದ ಹಿರಿಯರು ಅವರ ಮನವೊಲಿಸುತ್ತಾರೆ ಎಂದರು.

Leave A Reply

Your email address will not be published.

error: Content is protected !!