Shivamogga | Murder | ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋ ಚಾಲಕನ ಭೀಕರ ಹತ್ಯೆ !!
ಶಿವಮೊಗ್ಗ : ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋ ಡ್ರೈವರ್ ನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಇಲಿಯಾಸ್ ನಗರದ 100 ಅಡಿ ರಸ್ತೆಯಲ್ಲಿ ನಡೆದಿದೆ.
ಅಸೀಫ್ (25) ಕೊಲೆಯಾದ ಆಟೋ ಡ್ರೈವರ್ ಆಗಿದ್ದು, ಈತ ಶಿವಮೊಗ್ಗದ ಮಂಡ್ಲಿ ನಿವಾಸಿಯಾಗಿದ್ದಾನೆ. ಅಸೀಫ್ ಇಲಿಯಾಸ್ ನಗರಕ್ಕೆ ಬಂದಿದ್ದ ವೇಳೆ ಅದೇ ಏರಿಯಾದ ಜಬೀ ಎಂಬಾತನಿಂದ ದಾಳಿ ಮಾಡಲಾಗಿದೆ. ಅಸೀಫ್ ಮೇಲೆ ಏಕಾಏಕಿ ಮಾರಕಾಸ್ತ್ರದಿಂದ ಮನಸೋ ಇಚ್ಚೇ ಜಬೀ (25) ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡು ಅಸೀಫ್ ರಕ್ತದ ಮಡುವಿನಲ್ಲಿ ಬಿದ್ದು, ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿರುವುದಾಗಿ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಹತ್ಯೆ ಆರೋಪಿ ಜಬೀ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಅಸೀಫ್ ಮೃತದೇಹ ಮೆಗ್ಗಾನ್ ಶವಾಗಾರಕ್ಕೆ ರವಾನಿಸಲಾಗಿದ್ದು ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.