Shivamogga | Train | B.Y Raghavendra | ಕೊರೊನಾ ಹಿನ್ನೆಲೆಯಲ್ಲಿ ನಿಂತಿದ್ದ ಎರಡು ವಿಶೇಷ ರೈಲುಗಳ ಸಂಚಾರ ಪುನರಾರಂಭ ; ಸಂಸದ ಬಿ.ವೈ ರಾಘವೇಂದ್ರ
ಶಿವಮೊಗ್ಗ : 2019- 2020ರಲ್ಲಿ ಪ್ರಾರಂಭಗೊಂಡಿದ್ದ ಶಿವಮೊಗ್ಗ-ರೇಣಿಗುಂಟ (ತಿರುಪತಿ) ಹಾಗೂ ಶಿವಮೊಗ್ಗ- ಬೆಂಗಳೂರು- ಮದ್ರಾಸ್ ಎಕ್ಸ್‌ಪ್ರೆಸ್ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದು, ಕೋವಿಡ್ ಹಿನ್ನೆಲೆ ದೇಶಾದ್ಯಂತ ರೈಲು ಸೇವೆಗಳನ್ನು ನಿಲುಗಡೆ ಮಾಡಿದ ಸಂದರ್ಭ ಈ ಎರಡು ರೈಲು ಸೇವೆಗಳನ್ನು ಸಹ ರೈಲ್ವೆ ಇಲಾಖೆಯಿಂದ ಹಿಂಪಡೆಯಲಾಗಿತ್ತು. ಆದರೆ ಈಗ ವಿಶೇಷ ರೈಲ್ವೆ ಸೇವೆಯನ್ನು ಮತ್ತೆ ಮುಂದುವರಿಸಲಾಗಿದೆ.
06223 ಶಿವಮೊಗ್ಗ- ಮದ್ರಾಸ್ ರೈಲು ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಸಂಜೆ 7ಕ್ಕೆ ಹಾಗೂ 06224 ಮದ್ರಾಸ್- ಶಿವಮೊಗ್ಗ ರೈಲು ಪ್ರತಿ ಸೋಮವಾರ ಮತ್ತು ಬುಧವಾರ ಮದ್ರಾಸ್ಸಿನಿಂದ ಮಧ್ಯಾಹ್ನ 3.30ಕ್ಕೆ ಪ್ರಯಾಣಿಸಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.