ಶಿವಮೊಗ್ಗ : ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಪ್ರತಿಭಾ ಸೌoಶಿಮಟ್ ರವರ ಮಿಸಸ್ ಇಂಡಿಯಾ ಕರ್ನಾಟಕ – 2023 ಸ್ಪರ್ಧೆಯಲ್ಲಿ ಜರ್ಮನಿ ವಾಸವಾಗಿರುವ ಶಿವಮೊಗ್ಗದ ಶ್ವೇತಾ ಕೊಡದ ಬ್ಯೂಟಿ ಪೇಜಂಟಿನಲ್ಲಿ ಭಾಗವಹಿಸಿ ಇಂಟಲಿಕ್ಚುವಲ್ ಹಾಗೂ ಓವರ್ಸಿಸ್ ಕ್ವೀನ್ ಕಿರೀಟವನ್ನು ಗೆದ್ದಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 35 ಜನ ಸ್ಪರ್ಧಿಗಳಲ್ಲಿ ಶ್ವೇತಾ ಕೊಡದ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೌಂದರ್ಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಜರ್ಮನಿಯ ಲಾಜಿಸ್ಟಿಕ್ ಕಂಪನಿಯಲ್ಲಿ ಸಾಫ್ಟ್ವೇರ್ ವೃತ್ತಿಯಲ್ಲಿದ್ದಾರೆ. ವೃತ್ತಿಯ ಜೊತೆಗೆ ಅವರು ಹಲವು ಎನ್ ಜಿ ಓ ಗಳ ಮೂಲಕ 60 ದಾಟಿದ ಜರ್ಮನ್ ಮತ್ತು ಜೆಕ್ ನ ಹಿರಿಯ ನಾಗರಿಕರಿಗೆ ಆಂಗ್ಲ ಭಾಷೆಯನ್ನು ಹೇಳಿಕೊಡುತ್ತಾ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
ಶ್ವೇತಾ ಕೊಡದ ಅವರು ಈ ಸೌಂದರ್ಯ ಸ್ಪರ್ಧೆಗಾಗಿ ಜಿಲ್ಲಾ ಮಟ್ಟದಲ್ಲಿ ನಡೆದ ಆಡಿಶನ್ ಗೆ ಜರ್ಮನಿಯಿಂದಲೇ ಭಾಗವಹಿಸಿ, ಮಿಸಸ್ ಇಂಡಿಯಾ ಕರ್ನಾಟಕ 2023ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದರು. ಹೀಗೆ ಅವಕಾಶ ಪಡೆದ ಅವರು ಪ್ರಶಸ್ತಿಯನ್ನು ಕೂಡಾ ಗೆದ್ದು ಬೀಗಿದ್ದಾರೆ. ಶ್ವೇತಾ ಕೊಡದ ಸಾಫ್ಟ್ವೇರ್ ಇಂಜಿನಿಯರ್ ವೃತ್ತಿಯ, ಪ್ರವೀಣ್ ಬಿರಾದರ್ ಅವರ ಪತ್ನಿ, ಸದ್ಯ ದಂಪತಿ ಜರ್ಮನಿಯಲ್ಲಿ ನೆಲೆಸಿದ್ದಾರೆ. ಇದೇ ವೇಳೆ ಶ್ವೇತಾ ಅವರ ಪತಿ ಪ್ರವೀಣ್ ಬಿರಾದಾರ ಅವರಿಗೆ ಬೆಸ್ಟ್ ಸಪೋರ್ಟಿವ್ ಹಸ್ಬೆಂಡ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…