SKDRDP ವತಿಯಿಂದ ಶ್ರೀಚಂದ್ರಮೌಳೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹5 ಲಕ್ಷ ವಿತರಣೆ

0 654

ಹೊಸನಗರ: ಹೊಸನಗರ (Hosanagara) ಯೋಜನಾ ಕಛೇರಿ ವ್ಯಾಪ್ತಿಯ ಕಾರಣಗಿರಿ ವಲಯದ ಶ್ರೀರಾಮಚಂದ್ರಪುರಮಠ ಸಮೀಪದ ಶ್ರೀಚಂದ್ರಮೌಳೇಶ್ವರ ದೇವಸ್ಥಾನದ (Temple) ಜೀರ್ಣೋದ್ಧಾರ ಕಾರ್ಯಕ್ಕೆ ‍ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ 5 ಲಕ್ಷ ರೂ. ಮೊತ್ತದ ಸಹಾಯ ಮಂಜೂರು ಮಾಡಿದ್ದು, ಸಂಬಂಧಿಸಿದ ಶ್ರೀಚಂದ್ರಮೌಳೇಶ್ವರ ದೇವಸ್ಥಾನ ಸೇವಾ ಸಮಿತಿಯವರಿಗೆ ಡಿಡಿ ವಿತರಣೆ ಮಾಡಲಾಯಿತು.

ಈ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ನಾರಾಯಣ್‌ ಕಾಮತ್‌, ದೇವಾನಂದ್‌ ಎನ್‌.ಆರ್‌, ತಾಲೂಕಿನ ಯೋಜನಾಧಿಕಾರಿ ಬೇಬಿ.ಕೆ, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕಿ ರೇಖಾ, ಇ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಲಕ್ಷ್ಮೀ, ಸೇವಾಪ್ರತಿನಿಧಿ ಆಶಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!