SSLC RESULT | 29ನೇ ಸ್ಥಾನಕ್ಕೆ ಕುಸಿದ ಶಿವಮೊಗ್ಗ ಜಿಲ್ಲೆ ! ರಾಜ್ಯಕ್ಕೆ 2ನೇ ರ‍್ಯಾಂಕ್‌ ಪಡೆದ ತೀರ್ಥಹಳ್ಳಿ ಬಾಲಕ

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯನ್ನು 10 ರೊಳಗಿನ ಸ್ಥಾನದಲ್ಲಿ ಕಾಣಲು ಶಿಕ್ಷಣ ಇಲಾಖೆಯ ನಾನಾ ಪ್ರಯತ್ನದ ನಡುವೆಯೂ ಶಿವಮೊಗ್ಗ ಜಿಲ್ಲೆಯ ಫಲಿತಾಂಶ ಇಳಿಕೆ ಕಂಡಿದ್ದು. 10 ರೊಳಗಿನ ಬದಲು 30ರೊಳಗಿನ ಸ್ಥಾನಕ್ಕೆ ಕುಸಿದಿದೆ.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ 26 ಮಂದಿ ಟಾಪರ್‌ಗಳನ್ನು ಹೊಂದಿದ್ದು, ಜಿಲ್ಲಾವಾರು ಸ್ಥಾನದ ಲೆಕ್ಕಚಾರದಲ್ಲಿ 29ನೇ ಸ್ಥಾನಕ್ಕೆ ಕುಸಿದಿದೆ. 2021 ಸಾಲಿನಲ್ಲಿ ಜಿಲ್ಲಾವಾರು ಪಟ್ಟಿಯಲ್ಲಿ ಶಿವಮೊಗ್ಗ 19ನೇ ಸ್ಥಾನದಲ್ಲಿತ್ತು. ಕಳೆದ ಬಾರಿ 23ನೇ ಸ್ಥಾನಕ್ಕೆ ಕುಸಿದಿತ್ತು. ಈಗ ಮತ್ತೆ 3 ಸ್ಥಾನ ಇಳಿಕೆಯಾಗಿದ್ದು, ಶೇ.84 ಫಲಿತಾಂಶದೊಂದಿಗೆ 29ನೇ ಸ್ಥಾನಕ್ಕೆ ಕುಸಿದಿದೆ.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ನಾಲ್ಕೈದು ವರ್ಷಗಳಿಂದ ಡಿಡಿಪಿಐ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು. ಜಿಲ್ಲೆಯನ್ನು 10 ರೊಳಗಿನ ಸ್ಥಾನದಲ್ಲಿ ಕಾಣಬೇಕೆಂಬ ಗುರಿಯೊಂದಿಗೆ ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಫಲಿತಾಂಶ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹುರಿದುಂಬಿಸಲಾಗಿತ್ತು. ಆದರೆ, ಈ ಬಾರಿ ಶಿಕ್ಷಣ ಇಲಾಖೆಯ ಹಾಗೂ ಶಾಲಾ ಮುಖ್ಯಸ್ಥರ ಪ್ರಯತ್ನ ಪರಿಣಾಮ ಬೀರಿಲ್ಲ.

ಜಿಲ್ಲೆಗೆ ಅಮಿತ್ ಟಾಪರ್:

ಪ್ರಜ್ಞಾ ಭಾರತಿ ಪ್ರೌಢಶಾಲೆ ತೀರ್ಥಹಳ್ಳಿ ಅಮಿತ್ ಶಾಸ್ತ್ರಿ ಎಚ್.ಎಸ್ ರಾಜ್ಯಕ್ಕೆ 2ನೇ ರ‍್ಯಾಂಕ್‌ ಪಡೆದಿದ್ದು ಜಿಲ್ಲೆಗೆ ಮೊದಲು ಹಾಗೂ ಮತ್ತು ತಾಲೂಕಿಗೆ 1ನೇ ರ‍್ಯಾಂಕ್‌ ಪಡೆದು ತೀರ್ಥಹಳ್ಳಿಗೆ  ಕೀರ್ತಿ ತಂದಿರುತ್ತಾರೆ.

ತಂದೆ, ತಾಯಿ ಇಬ್ಬರು ಕೂಡ ಶಿಕ್ಷಕ ವೃತ್ತಿಯಲ್ಲಿದ್ದು. ತಂದೆ ಶಿವಪ್ರಸಾದ್ ಸಹ ಶಿಕ್ಷಕರಾಗಿ ಬಾಲಕಿಯರ ಪ್ರೌಢಶಾಲೆ  ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ವಾಣಿ ವಿ. ಅನಂತಮೂರ್ತಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ. ಅಮಿತ್ ಶಾಸ್ತ್ರಿ ಹೆಚ್ ಎಸ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಚೆಸ್ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿ ತಾಲೂಕಿಗೆ ಕೀರ್ತಿ ತಂದಿದ್ದರು.


ಶಿವಮೊಗ್ಗದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಆರ್. ಪ್ರಣಮ್ಯ 623, ಸೆಂಟ್ ಡೋಮಿನಿಕ್ಸ್ ಶಾಲೆ ಎಸ್.ನಿಖಿತಾ 623 ಅಂಕಗಳಿಸುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಅಂತೆಯೇ ಪ್ರಸ್ತುತ ವಿಕಾಸ, ಶ್ರೀ ರಾಮಕೃಷ್ಣ ವಿದ್ಯನಿಕೇತನ, ಆದಿಚುಂಚನಗಿರಿ ಶಾಲೆಗಳ ಮಕ್ಕಳು ಸಹ ಸಾಕಷ್ಟು ಅಂಕ ಗಳಿಸಿದ್ದಾರೆ. 

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!