Thirthahalli | ಆಗುಂಬೆ ಬಳಿ ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು !

0 797

ತೀರ್ಥಹಳ್ಳಿ : ಚಲಿಸುತ್ತಿದ್ದ ಕಾರೊಂದು ನೋಡು ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಆಗುಂಬೆ ಸಮೀಪದ ತಲ್ಲೂರಂಗಡಿ ಸಮೀಪ ಇಂದು ನಡೆದಿದೆ.

ಕಾರಿನ ಎಂಜಿನ್ ಅತಿಯಾಗಿ ಬಿಸಿಯಾಗಿದ್ದ ಕಾರಣ ಬೆಂಕಿ ಹತ್ತಿ ಉರಿದುಕೊಂಡಿರಬಹುದು ಎನ್ನಲಾಗಿದೆ. ಆದರೆ ಬೆಂಕಿ ಸಂಪೂರ್ಣ ಕಾರನ್ನು ಹೊತ್ತಿಕೊಂಡು ಉರಿದಿದ್ದು ತೀರ್ಥಹಳ್ಳಿ – ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದವರು ಈ ಅವಘಡದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಎಲ್ಲಿಯದ್ದು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಸ್ವಲ್ಪ ಸಮಯ ಟ್ರಾಫಿಕ್ ಕೂಡ ಜಾಮ್ ಆಗಿತ್ತು. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!