Thirthahalli | ತುಂಗಾ ನದಿಯಲ್ಲಿ ಕಲ್ಲು ಬಂಡೆಗಳ ಮಧ್ಯೆ ಮಹಿಳೆಯ ಶವ ಪತ್ತೆ !
ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಕಲ್ಲು ಬಂಡೆಗಳ ಮಧ್ಯೆ ಮಹಿಳೆಯ ಶವ ಪತ್ತೆಯಾಗಿದೆ.
ತುಮಕೂರು ಜಿಲ್ಲೆ ಮಧುಗಿರಿಯ ಕೋಡಿಗೆಹಳ್ಳಿ ಲತಾಮಣಿ (44) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಸಾಲ ಭಾದೆ ತಾಳಲಾರದೆ ಈಕೆ ಶುಕ್ರವಾರ ಬೆಳಗ್ಗೆ ತೀರ್ಥಹಳ್ಳಿ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಈಕೆಯ ಡೆತ್‌ನೋಟ್ ಮತ್ತು ದಾಖಲೆಗಳು ಸಿಕ್ಕಿದ್ದು, ಆಕೆ ಹೇಗೆ ಇಲ್ಲಿಗೆ ಬಂದಳು ಎಂಬುದು ಕುತೂಹಲ ಮೂಡಿಸಿದೆ. ಆಕೆಯ ಆಧಾರ್ ಕಾರ್ಡ್, ಸಾಲದ ಬಗ್ಗೆ ಮಾಹಿತಿ ಪತ್ರ ಸಿಕ್ಕಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ.
ಕಲ್ಲು ಬಂಡೆಯ ಮಧ್ಯೆ ಶವ ಸಿಕ್ಕಿಹಾಕಿಕೊಂಡಿತ್ತು. ಸಮಾಜ ಸೇವಕ, ಮುಳುಗು ತಜ್ಞ ಕುರುವಳ್ಳಿಯ ಪ್ರಮೋದ್ ಪೂಜಾರಿ ತಂಡ ದಡಕ್ಕೆ ಶವ ತಂದು ಹಾಕಿದ್ದು ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.