Thirthahalli | ತುಂಗಾ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

0 1,170

ತೀರ್ಥಹಳ್ಳಿ : ಪಟ್ಟಣದ ಜಯಚಾಮರಾಜೇಂದ್ರ ಸೇತುವೆಯ ಕೆಳಭಾಗದ ತುಂಗಾ ನದಿ ನೀರಿನಲ್ಲಿ ಇಂದು ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.

ಮೃತನನ್ನು ದೇವರಾಜ್ (48) ಎಂದು ಗುರುತಿಸಲಾಗಿದೆ. ಈತ ಪ್ರತಿದಿನ ಬೆಳಗ್ಗೆ ಮನೆ ಮನೆಗೆ ಹಾಲು ಹಾಕುತ್ತಿದ್ದ. ಕಳೆದ ಎರಡ್ಮೂರು ದಿನಗಳಿಂದ ಕಾಣೆಯಾಗಿದ್ದು ಕುಟುಂಬಸ್ಥರು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈತ ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ.

ಈತ ಪಟ್ಟಣದಲ್ಲಿ ದೇವು ಎಂದೇ ಚಿರಪರಿಚಿತರಾಗಿದ್ದರು. ಇತನ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!