ಸಮೃದ್ಧಿ ಶಾಂತಿಯ ಬದುಕಿಗೆ ರೇಣುಕಾಚಾರ್ಯರ ಚಿಂತನೆಗಳು ದಾರಿ ದೀಪ ; ಶ್ರೀ ರಂಭಾಪುರಿ ಜಗದ್ಗುರುಗಳು

0 30


ಸೊರಬ : ಮಾನವ ಜೀವನದ ಉನ್ನತಿಗೆ ಧರ್ಮಾಚರಣೆ ಅಗತ್ಯವಿದೆ. ಅರಿವು ಆದರ್ಶಗಳಿಂದ ಮನುಷ್ಯನ ಬದುಕು ಸಮೃದ್ಧಗೊಳ್ಳಬೇಕು. ಈ ನಿಟ್ಟಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ದಾರಿ ದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶನಿವಾರ ತಾಲೂಕಿನ ದುಗ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ, ಶ್ರೀ ಮಠದ 47ನೇ ವಾರ್ಷಿಕೋತ್ಸವ ಹಾಗೂ ಲಿಂ.ಶ್ರೀ ಮುರುಘೇಂದ್ರಸ್ವಾಮಿಗಳವರ ಚತುರ್ಥ ವರ್ಷದ ಪುಣ್ಯಾರಾಧನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಹಗಲು ಸೂರ್ಯ ರಾತ್ರಿ ಚಂದ್ರ ನಮಗೆ ಬೆಳಕನ್ನು ಕೊಡುತ್ತಾನೆ. ಆದರೆ ಸರ್ವ ಕಾಲದಲ್ಲೂ ಸರ್ವ ಸಮುದಾಯಕ್ಕೂ ಧರ್ಮ ಬೆಳಕನ್ನು ಕೊಡುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗಪುರುಷರಾಗಿ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯನ್ನು ಹೊಂದಿ ಸಾಮರಸ್ಯದಿಂದ ಬದುಕಿ ಬಾಳಬೇಕು ಎಂದ ಜಗದ್ಗುರುಗಳು ಲಿಂ.ಶ್ರೀ ಮುರುಘೇಂದ್ರ ಶ್ರೀಗಳವರ ದೂರದೃಷ್ಠಿ ಮತ್ತು ಅವರು ಮಾಡಿದ ಸತ್ಕಾರ್ಯಗಳನ್ನು ನೆನಪಿಸಿಕೊಂಡರು. ಇಂದಿನ ಮಠಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಭಕ್ತರಿಗೆ ಸಂಸ್ಕೃತಿಯನ್ನು ಮನವರಿಕೆ ಮಾಡಿ ಭಕ್ತರ ಪಾಲಿಗೆ ಆಶಾದಾಯಕ ಭಾವನೆ ಉಂಟು ಮಾಡಿದ್ದನ್ನು ಕಂಡು ತಮಗೆ ಹರುಷವಾಗಿದೆ ಎಂದರು.


ಧರ್ಮ ಸಮಾರಂಭವನ್ನು ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀ ಮಠದ ಅಭಿವೃದ್ಧಿಯ ಕಾರ್ಯಗಳು ನಡೆದಿವೆ. ರೇವಣಸಿದ್ಧೆಶ್ವರ ಶ್ರೀಗಳ ಕ್ರಿಯಾಶೀಲತೆಯಿಂದಾಗಿ ಭಕ್ತರ ಸಹಕಾರದಿಂದಾಗಿ ಶ್ರೀ ಮಠ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.


ಯಜ್ಞ ಸಂಪುಟ ಕೃತಿಯನ್ನು ಮಾಜಿ ಶಾಸಕ ವಿ.ಎಸ್.ಪಾಟೀಲ ಬಿಡುಗಡೆ ಮಾಡಿದರು.


ನೇತೃತ್ವ ವಹಿಸಿದ ಸುಕ್ಷೇತ್ರ ದುಗ್ಲಿ-ತಪೋಕ್ಷೇತ್ರ ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಶ್ರೀ ಗುರುವಿನ ಮಾರ್ಗದರ್ಶನದಲ್ಲಿ ಧರ್ಮದ ದಾರಿಯಲ್ಲಿ ಮುನ್ನಡೆದಾಗ ನಾವು ಕೈಗೊಂಡ ಕಾರ್ಯಗಳು ಯಶಸ್ಸು ಕಾಣುವುದರಲ್ಲಿ ಸಂದೇಹವಿಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳು ತೋರಿದ ದಾರಿಯಲ್ಲಿ ತಾವು ಮುನ್ನಡೆಯುತ್ತಿದ್ದೇವೆ ಎಂದರು. ಜಡೆ ಮಹಾಂತ ಸ್ವಾಮಿಗಳು, ಮಳಲಿ ಡಾ.ನಾಗಭೂಷಣ ಶ್ರೀಗಳು, ಸಿಂಧನೂರು-ಕನ್ನೂರು ಸೋಮನಾಥ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀಗಳು, ಸಂಗನಾಳ ಶಿವಲಿಂಗ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.


ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು.ಎಮ್.ತಲ್ಲೂರು, ಡಾ.ಜ್ಞಾನೇಶ್ ಹೆಚ್.ಇ., ಸರಿತಾ ಪರಶುರಾಮಪ್ಪ, ಮಂಜುನಾಥ ಸಿ.ಹೆಚ್., ಗ್ರಾಮ ಪಂಚಾಯತ ಸದಸ್ಯರಾದ ಚಂದ್ರಪ್ಪ ಡಿ., ರೂಪ ಪರಶುರಾಮ ಆಗಮಿಸಿದ್ದರು.

ಅ.ಭಾ.ವೀ.ಮಹಾಸಭಾ ಸೊರಬ ತಾಲೂಕ ಘಟಕದ ಅಧ್ಯಕ್ಷ ಬಸವರಾಜಪ್ಪ ಬಾರಂಗಿ, ಅ.ಭಾ.ವೀ.ಲಿಂ.ಸಂಘಟನಾ ವೇದಿಕೆ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ವೀರೇಶಗೌಡ್ರು, ಗುರು ಪ್ರಸನ್ನಗೌಡ್ರು ಬಾಸೂರ, ಅರುಣ ಕುಮಾರ ಎನ್.ಪಿ. ಹಾಗೂ ದೇಸಾಯಿ ಶಂಕ್ರಪ್ಪಗೌಡ್ರು, ಟಿ.ಜಿ.ನಾಡಿಗೇರ್, ದ್ಯಾಮಣ್ಣ ದೊಡ್ಡಮನಿ, ಪ್ರದೀಪ ಎಸ್.ಗೌಡ್ರು, ಪ್ರಶಾಂತ ಗೌಡ್ರು ಸಂತೊಳ್ಳಿ, ಹನುಮಂತಪ್ಪ ಮಡ್ಲೂರ, ಡಾ.ಪ್ರಭು ಸಾಹುಕಾರ್, ಪಂ.ಕೃಷ್ಣ ಭಟ್, ಮೃತ್ಯುಂಜಯಸ್ವಾಮಿ ಹಿರೆಮಠ, ಕೆರೆಸ್ವಾಮಿಗೌಡ್ರು ಸಣ್ಣಪ್ಪಗೌಡ್ರ, ಪ್ರಶಾಂತ ಕೆ.ಎಸ್. ಸೇರಿದಂತೆ ಹಲವಾರು ಗಣ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು.

ಹಿರೇಕೆರೂರಿನ ಚನ್ನೇಶ ಶಾಸ್ತ್ರಿಗಳು ಸರ್ವರನ್ನು ಸ್ವಾಗತಿಸಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಕಡೆನಂದಿಹಳ್ಳಿ ಕರಬಸಮ್ಮ ಸಿ. ನಿರೂಪಿಸಿದರು.


ಚಿಕ್ಕಮಣಕಟ್ಟಿ ಶ್ರೀ ಜೋಡಿ ಬಸವೇಶ್ವರ ಭಜನಾ ಸಂಘ ಹಾಗೂ ಸದ್ಭಕ್ತರಿದಂದ ಮಹಾ ಪ್ರಸಾದ ಸೇವೆ ನಡೆಯಿತು.

Leave A Reply

Your email address will not be published.

error: Content is protected !!