ಗೋ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ದಂಡಾವತಿಗೆ ಬಾಗಿನ
ಸೊರಬ: ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಮೈದುಂಬಿದ ದಂಡಾವತಿ ನದಿಗೆ ಬಾಗಿನ ಸಮರ್ಪಿಸಲಾಯಿತು.
ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗಂಗೇ ಪೂಜೆ ಸಲ್ಲಿಸಿ, ನಂತರ ನದಿಗೆ ಬಾಗಿನ ಸಮರ್ಪಿಸಲಾಯಿತು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ. https://fb.watch/m0ixSbI172/?mibextid=MGVWDh&startTimeMs=2089
ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ದಂಡಾವತಿ ನದಿಗೆ ನೀರು ಬಂದಿರುವುದರಿಂದ ರೈತರಲ್ಲಿ ಸಂತಸ ತಂದಿದೆ. ಮಳೆಯಾಗದೇ ರೈತರಲ್ಲಿ ಚಿಂತೆ ಮೂಡಿತ್ತು. ಇದೀಗ ದಂಡಾವತಿ ನದಿ ಮೈದುಂಬಿದೆ. ಯಾವುದೇ ಅನಾಹುತ ಸೃಷ್ಟಿಯಾಗದಿರಲಿ. ರೈತರಿಗೆ ಉತ್ತಮ ಬೆಳೆ ಕೈಸೇರಲಿ, ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಲಭಿಸಲಿ ಎಂದು ಪ್ರಾರ್ಥಿಸಿ ಸಮಿತಿಯಿಂದ ಬಾಗಿನ ಅರ್ಪಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗೋ ಸಂರಕ್ಷಣಾ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಸಹ ಕಾರ್ಯದರ್ಶಿ ಶರತ್ ಸ್ವಾಮಿ, ಪ್ರಮುಖರಾದ ಬಂಗಾರಪ್ಪ ಶೇಟ್, ಗುರುಶಾಂತಪ್ಪ ಗೌಡ, ಸುಮನಾ ಚಿದಾನಂದ ಗೌಡ, ಪುಷ್ಪ ಸಿದ್ದಲಿಂಗೇಶ್ವರ ಗುತ್ತಿ, ಪ್ರವೀಣ್ ಕುಮಾರ್ ಸೇರಿದಂತೆ ಇತರರಿದ್ದರು.