ಚಂದ್ರಗುತ್ತಿ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ ಮಂಜುನಾಥ ಶಣೈ, ಉಪಾಧ್ಯಕ್ಷರಾಗಿ ಸದಾನಂದ ಗೌಡ ನ್ಯಾರ್ಶಿ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಬುಧವಾರ ಎರಡನೇ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರ ಒಮ್ಮತದಲ್ಲಿ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಹನುಮಂತಪ್ಪ ಮಂಚೇರ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಮಂಜುನಾಥ ಶಣೈ ಮಾತನಾಡಿ, ಚಂದ್ರಗುತ್ತಿ ಭಾಗದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ಅಭಿವೃದ್ಧಿ ಪ್ರಗತಿಪರ ಚಟುವಟಿಕೆಗಳು ನಡೆಯಬೇಕು, ನಮ್ಮ ಸಂಘದ ಸದಸ್ಯರು ಹಾಗೂ ಎಲ್ಲಾ ಷೇರುದಾರರು ಸಹಕರಿಸಬೇಕು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು, ಜೊತೆಗೆ ನಮಗೆ ಸಹಕಾರ ನೀಡಿದ ನಿಕಟಪೂರ್ವ ಅಧ್ಯಕ್ಷರಾದ ಎನ್ ಗುತ್ಯಪ್ಪ, ಹಾಗೂ ಗಂಗಾಧರ ಗೌಡ್ರು ಇವರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಎನ್.ಜಿ ನಾಗರಾಜ್, ಬೆನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾರ್ಯಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್. ಗುತ್ಯಪ್ಪ, ನಿರ್ದೇಶಕರಾದ ಗಂಗಾಧರ ಗೌಡ, ಕಾಳಪ್ಪ, ರಮೇಶ್ ಕೆ, ರಾಮಕೃಷ್ಣ ಶೇಟ್, ಸದಾನಂದ ಗೌಡ, ಗುರುರಾಜ್, ರವಿ ಏನ್.ಸಿ, ಅಂಜಲಿ ಪಿ.ಎಸ್, ಕಮಲಾವತಿ, ಪರಮೇಶ್ ಎಂ.ಆರ್, ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರ ಅಧಿಕಾರಿ ಆರ್ ಸಂತೋಷ್ ಕುಮಾರ್, ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಪಿ.ಪಿ ಸುನಿಲ್ ಕುಮಾರ್, ಸಿಬ್ಬಂದಿ ಸಂತೋಷ್ ಕೆ ಸೇರಿದಂತೆ ಮತ್ತಿತರರಿದ್ದರು.