ಮಲೆನಾಡಿನ ಗ್ರಾಮಸ್ಥರಿಂದ ಸಂಭ್ರಮದ ಕೆರೆ ಬೇಟೆ

0 0

ಸೊರಬ : ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಕೆರೆಬೇಟೆಯು ಸೊರಬ ಪುರಸಭೆ ವ್ಯಾಪ್ತಿಯ ಕೊಡಕಣಿ ಗ್ರಾಮದ ತಾವರೆಕೆರೆಯಲ್ಲಿ ಸಂಭ್ರಮದಿಂದ ನಡೆಯಿತು.


ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಹೆಗ್ಗಳಿಕೆ ಸೊರಬ ತಾಲೂಕಿನದ್ದಾಗಿದೆ. ಸುಮಾರು 1200 ಕೆರೆಗಳಿವೆ. ಅಂದ ಹಾಗೆ ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆಗಳು ಬತ್ತುತ್ತವೆ. ಈ ವೇಳೆಯೇ ರೈತರ ಜನಪದ‌ ಕ್ರೀಡೆಯಾದ ಕೆರೆಬೇಟೆ ರಂಗೇರುತ್ತದೆ.

ಗ್ರಾಮದಲ್ಲಿ‌ ಸುಮಾರು‌ 500 ಮನೆಗಳಿದ್ದು, ಮನೆಗೆ ಎರಡು ಕೂಣಿ, ಒಂದು ಜರಡಿ ಬಲೆ ಬಳಸಿ ಮೀನು ಹಿಡಿಯಲು ಅವಕಾಶ ಒದಗಿಸಲಾಗಿತ್ತು.
ಗ್ರಾಮಸ್ಥರು ಮಾತ್ರವಲ್ಲದೇ ಹಳೇಸೊರಬ, ಹರಿಗೆ, ಕೋಡಿಹಳ್ಳಿ, ಅಂಡಿಗೆ, ಮಾವಲಿ ಸೇರಿದಂತೆ ವಿವಿಧ ಗ್ರಾಮಗಳಿಂದ ತಾಲೂಕಿನ ವಿವಿಧ ಭಾಗಗಳಿಂದ ಜನತೆ ಗ್ರಾಮೀಣ ಕ್ರೀಡೆ ಕೆರೆ ಬೇಟೆಯಲ್ಲಿ ಪಾಲ್ಗೊಂಡಿದ್ದರು.‌

ಈ ಬಗ್ಗೆ ಸುದ್ದಿಗಾರರ ಜೊತೆ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್ ಕೊಡಕಣಿ ಮಾತನಾಡಿ, ಮಲೆನಾಡು ಭಾಗದಲ್ಲಿ ಕೆರೆಬೇಟೆಗೆ ಮಹತ್ವವಿದೆ. ಪೂರ್ವಜರು ಆಚರಿಸಿಕೊಂಡು ಬಂದ ಹಬ್ಬವನ್ನು ಆಚರಿಸುತ್ತಿದ್ದೇವೆ. ಮಳೆಗಾಲದಲ್ಲಿ ಕೆರೆಗೆ ಮೀನುಗಳನ್ನು ಬಿಡಲಾಗಿತ್ತು. ಬೇಸಿಗೆಯಲ್ಲಿ ಕೆರೆಬೇಟೆ ಮಾಡಲಾಗುತ್ತದೆ. ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ ಎಂದರು.

ಇನ್ನು ಕೆರೆ ಬೇಟೆ ವೀಕ್ಷಿಸಿಲು ನೂರಾರು ಮಂದಿ ವಯಸ್ಸಿನ ಬೇಧವಿಲ್ಲದೆ ಆಗಮಿಸಿ ಸಂತಸಪಟ್ಟರು.

Leave A Reply

Your email address will not be published.

error: Content is protected !!