ಸೊರಬ: ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಆಮ್ಆದ್ಮಿ ಪಕ್ಷ ಬಿಡುಗಡೆ ಮಾಡಿದ್ದು, ಸೊರಬ ವಿಧಾನಸಭಾ ಅಭ್ಯರ್ಥಿಯಾಗಿ ಕೆ.ವೈ. ಚಂದ್ರಶೇಖರ್ ಹುರಳಿ ಅವರನ್ನು ಘೋಷಣೆ ಮಾಡಿದೆ.
ಚುನಾವಣೆ ಘೋಷಣೆ ಬೆನ್ನಲ್ಲೆ ಆಮ್ಆದ್ಮಿ ಪಕ್ಷ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಕೃಷಿಕರು ಹಾಗೂ ಸ್ವಯಂ ಉದ್ಯೋಗಿ ಆಗಿರುವ ಚಂದ್ರಶೇಖರ ಹುರಳಿ ಅವರಿಗೆ ಪಕ್ಷ ಟಿಕೆಟ್ ಘೋಷಣೆ ಮಾಡಿದೆ.
ಈ ಬಗ್ಗೆ ಪಟ್ಟಣದಲ್ಲಿ ಆಮ್ಆದ್ಮಿ ಪಕ್ಷದ ಸೊರಬ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ವೈ. ಚಂದ್ರಶೇಖರ ಹುರಳಿ ಮಾತನಾಡಿ, ಆಮ್ಆದ್ಮಿ ಪಕ್ಷದಿಂದ ಟಿಕೆಟ್ ನೀಡಿರುವುದಕ್ಕೆ ಅಭಾರಿಯಾಗಿದ್ದೇನೆ. ಟಿಕೆಟ್ ನೀಡಲು ಸಹಕಾರ ನೀಡಿದ ಪಕ್ಷದ ರಾಜ್ಯಧ್ಯಕ್ಷರಾದ ಪೃಥ್ವಿ ರೆಡ್ಡಿ, ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಪ್ರತಿ ಮನೆ ಮನಗಳಿಗೆ ಆಮ್ಆದ್ಮಿ ಪಕ್ಷ ವಿಚಾರಗಳನ್ನು ತಿಳಿಸುವ ಕೆಲಸ ಮಾಡಲಾಗುವುದು. ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ತಿಳಿಸಿದರು.