Categories: Soraba

ಅಧಿಕಾರಿಗಳೇ ನಡೆಸುತ್ತಿದ್ದ ಅಕ್ರಮ ನಾಟ ಸಾಗಾಟ ಪತ್ತೆ ಹಚ್ಚಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ; ಸಾರ್ವಜನಿಕರಿಂದ ಪ್ರಶಂಸೆ

ಸೊರಬ: ಪಟ್ಟಣದಲ್ಲಿ ಹಳೇ ನಾಟಗಳನ್ನು ಅಕ್ರಮವಾಗಿ ಸಾಗಾಟಕ್ಕೆ ಸಿದ್ದವಾಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

ಪಟ್ಟಣ ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ಪಟ್ಟಣದ ಹಳೇ ತಾಲೂಕು ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ನಾಟವನ್ನು ಸಂಗ್ರಹಿಸಲಾಗಿತ್ತು. ಆದರೆ ಅಕ್ರಮವಾಗಿ ಸಾಗಾಟ ಮಾಡುತ್ತಿವ ಖಚಿತ ಮಾಹಿತಿ ‌ಮೇರೆಗೆ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಅವರ ತಂಡ ದಾಳಿ ನಡೆಸಿ, ಸಾಗಾಟಕ್ಕೆ ಸಿದ್ದವಾಗಿದ್ದ ಹಳೇ ನಾಟ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಇದೇ ಮಾದರಿ‌ ಮೂರ್ನಾಲ್ಕು ಲೋಡ್ ನಾಟ ಸಾಗಾಟ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಅರಣ್ಯಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.

ಇನ್ನು ಯಾವುದೇ ಒತ್ತಡಕ್ಕೆ ಮಣಿಯದೇ ಅಧಿಕಾರಿಗಳೇ ನಡೆಸುತ್ತಿದ್ದ ಅಕ್ರಮವನ್ನು ಬಯಲಿಗೆ ತಂದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ನೇತೃತ್ವದ ತಂಡವನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ.

Malnad Times

Recent Posts

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

1 hour ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

7 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

15 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 day ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

1 day ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

1 day ago