Categories: Soraba

Route March | ವಿಧಾನಸಭಾ ಚುನಾವಣೆ ಹಿನ್ನೆಲೆ ; ಸಿಆರ್‌ಪಿಎಫ್ ಪಡೆಯಿಂದ ಪಥಸಂಚಲನ

ಸೊರಬ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಸಿಆರ್‌ಪಿಎಫ್ ಪಡೆಯಿಂದ ಬುಧವಾರ ಪಥಸಂಚಲನ ನಡೆಸಲಾಯಿತು.


ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಸಾಗರ ರಸ್ತೆ, ಪುನಃ, ಖಾಸಗಿ ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪಥಸಂಚನ ನಡೆಸಿ ನಂತರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ತಲುಪಿತು.
ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತಾ ಕ್ರಮ ಕೈಗೊಂಡಿದ್ದು, ಈಗಾಗಲೇ 80 ಸಿಬ್ಬಂದಿಯನ್ನು ಒಳಗೊಂಡ ಸಿಆರ್‌ಪಿಎಫ್ ಪಡೆ ಆಗಮಿಸಿದೆ.


ಡಿಸಿಆರ್ ಬಿ ಡಿವೈಎಸ್ಪಿ ಡಿ.ಟಿ ಪ್ರಭು ನೇತೃತ್ವದಲ್ಲಿ ಸಿಪಿಐ ಭಾಗ್ಯವತಿ, ಪಿಎಸ್‌ಐ ಎಚ್.ಎನ್. ನಾಗರಾಜ್, ಆನವಟ್ಟಿ ಪಿಎಸ್‌ಐ ಶಿವಪ್ರಸಾದ್, ಸೊರಬ ಕ್ರೈಂ ಪಿಎಸ್‌ಐ ಮಾಳಪ್ಪ ವೈ. ಚಿಪ್ಪಲಕಟ್ಟಿ, ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೋ ಎನ್. ನೀಲಪ್ಪಯ್ಯನ್ ಸೇರಿದಂತೆ ಪೊಲೀಸ್ ಠಾಣೆಯ 20 ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

Malnad Times

Recent Posts

ತನ್ನೊಂದಿಗೆ ಚರ್ಚೆಗೆ ಬರುವಂತೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್ !

ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…

5 hours ago

ಮತದಾನದಲ್ಲೂ ಶಿವಮೊಗ್ಗ ಎತ್ತರಕ್ಕೇರಲಿ ; ಸ್ನೇಹಲ್ ಸುಧಾಕರ್ ಲೋಖಂಡೆ

ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಲ್ಲಾ…

5 hours ago

ಹೃದಯಾಘಾತ ; ಮಮತಾ ನಿಧನ

ಹೊಸನಗರ : ಪಟ್ಟಣದ ಮಾರಿಗುಡ್ಡ ನಿವಾಸಿ ಮಮತಾ ಚಂದ್ರಶೇಖರ್ (43) ಶನಿವಾರ ಬೆಳಿಗ್ಗೆ ತಮ್ಮ ಸ್ವಂತ ಮನೆಯಲ್ಲಿ ಹೃದಯಘಾತದಿಂದ ನಿಧನರಾದರು.…

5 hours ago

ಶ್ರೀಮನ್ಮಹಾರಥೋತ್ಸವ ಜಾತ್ರೋತ್ಸವ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು…

6 hours ago

ಬಟಾಣಿಜಡ್ಡು ಗ್ರಾಮದಲ್ಲಿ ಭತ್ತದ ಬೆಳೆ ನಾಶಗೊಳಿಸಿದ ಕಾಡಾನೆಗಳು, ಆತಂಕದಲ್ಲಿ ರೈತರು

ರಿಪ್ಪನ್‌ಪೇಟೆ: ಕುಮದ್ವತಿ ನದಿ ತೀರದ ಬಟಾಣಿಜಡ್ಡು ಗ್ರಾಮದ ರೈತ ದಾನಪ್ಪ ಎಂಬುವರ ಭತ್ತದ ಬೆಳೆಗೆ ಎರಡು ಕಾಡಾನೆಗಳು ನುಗ್ಗಿ ಬೇಸಿಗೆ…

8 hours ago

ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದ ಈಚಲುಕೊಪ್ಪ, ಕಾಪೇರಮನೆ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ವ್ಯಾಪ್ತಿ ಹಲುಸಾಲೆ - ಮಳವಳ್ಳಿ, ಕಾಪೇರಮನೆ ಗ್ರಾಮದ ಗ್ರಾಮಸ್ಥರು ಸಾಗರ-ಹೊಸನಗರದ ಮಧ್ಯ ಭಾಗದಲ್ಲಿದ್ದು…

11 hours ago