Thirthahalli | ಅರಳಸುರಳಿಯಲ್ಲಿ‌ ಮೂವರ ಸಜೀವ ದಹನ ಪ್ರಕರಣ ; ಎರಡ್ಮೂರು ಕ್ಲೂ ಸಿಕ್ಕಿದೆ – ಎಸ್‌ಪಿ

0 1,960

ತೀರ್ಥಹಳ್ಳಿ : ಅರಳಸುರಳಿಯಲ್ಲಿ ಕೇಕುಡ ಕುಟುಂಬದ ಮೂವರ ಸಜೀವ ದಹನ ಘಟನೆ ಸಂಬಂಧ ಎಸ್‌ಪಿ ಮಿಥುನ್ ‌ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಮನೆಯ ಕೋಣೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ದೇಹಗಳು ಪತ್ತೆಯಾಗಿದೆ. ಘಟನೆ ನಡೆದ ಅರ್ಧಗಂಟೆಯೊಳಗೆ ತೀರ್ಥಹಳ್ಳಿಯಿಂದ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದಾರೆ.

ರಾಘವೇಂದ್ರ, ನಾಗರತ್ನ, ಶ್ರೀರಾಮ ಮೃತಪಟ್ಟಿದ್ದಾರೆ. ಈ ಘಟನೆಯ ಎರಡ್ಮೂರು‌ ಕ್ಲೂ ಸಿಕ್ಕಿದೆ. ತನಿಖೆ ಮುಂದುವರಿದಿದೆ ಎಂದರು.

ದಾವಣಗೆರೆಯಿಂದ ಪೋರೆನ್ಸಿಕ್ ತಜ್ಞರ ತಂಡ, ಸೀನ್ ಆಫ್ ಕ್ರೈಂ ಆಫೀಸರ್ಸ್ ತಂಡ ಹಾಗೂ ಡಾಗ್ ಸ್ಕ್ವಾಡ್ ಆಗಮಿಸಿದೆ‌. ತನಿಖೆ ‌ನಂತರ ಏಕೆ ಆಗಿದೆ ಅಂತಾ ಗೊತ್ತಾಗಲಿದೆ. ಮನೆಯ‌ ಒಂದು ರೂಂ ನಲ್ಲಿ ಈ ಘಟನೆ ನಡೆದಿದ್ದು ಮೂರು ಬಾಡಿಗಳು ಒಂದರ ಮೇಲೊಂದು ಬಿದ್ದಿದೆ‌. ಮನೆಯ‌ ಒಳಗಡೆ ಕೆಲವು ಅಂಶ ಪತ್ತೆಯಾಗಿದೆ‌.

ಘಟನೆಯಲ್ಲಿ ಗಾಯಗೊಂಡ ಭರತಗೆ ಶೇ. 40 ರಿಂದ 50ರಷ್ಟು ಸುಟ್ಟ ಗಾಯಗಳಾಗಿದೆ. ಅವರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ‌. ಗಾಯಗೊಂಡಿರುವ ಭರತ್ ಹೇಳಿಕೆ ಪಡೆದು ತನಿಖೆ ನಡೆಸಲಾಗುವುದು‌. ತನಿಖೆ ಬಳಿಕ ಹೆಚ್ಚಿನ ವಿಚಾರ ಹೊರ ಬರಲಿದೆ. ತನಿಖೆಯಾಗದೇ ಏನು‌ ಹೇಳಲು ಬರುವುದಿಲ್ಲ ಎಂದರು.

Leave A Reply

Your email address will not be published.

error: Content is protected !!