ಗ್ರಾಮ ಪಂಚಾಯತಿ ಸದಸ್ಯತ್ವ ಅನರ್ಹ ; ಪರಾಜಿತ ಅಭ್ಯರ್ಥಿ ಸದಸ್ಯರನ್ನಾಗಿ ನೇಮಿಸುವಂತೆ ಕೋರ್ಟ್‌ ಆದೇಶ

0 111

ತೀರ್ಥಹಳ್ಳಿ : ಚುನಾವಣಾ ನಾಮಪತ್ರದಲ್ಲಿ ಕ್ರಿಮಿನಲ್‌ ಪ್ರಕರಣ ಉಲ್ಲೇಖಿಸದ ಹಿನ್ನಲೆಯಲ್ಲಿ ಕುರುವಳ್ಳಿ ನಾಗರಾಜ್ ಅವರ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯತ್ವ ಅನರ್ಹಗೊಳಿಸಿ ಹೈಕೋರ್ಟ್‌ ತೀರ್ಪು ಪ್ರಕಟಿಸಿದೆ.

ಡಿಸೆಂಬರ್ 2020ರಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೇಲಿನಕುರುವಳ್ಳಿ -1 ರಲ್ಲಿ ಬಿಸಿಎಂ (ಎ) ಮೀಸಲು ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾಗರಾಜ್‌ ತಮ್ಮ ಎದುರಾಳಿ ಗೋಪಾಲ ಪೂಜಾರಿ ವಿರುದ್ಧ ಜಯಗಳಿಸಿದ್ದರು.

ಆದರೆ ನಾಗರಾಜ್‌ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿಲ್ಲ. ತಮ್ಮ ಮೇಲಿನ ಕ್ರಿಮಿನಲ್‌ ಪ್ರಕರಣಗಳನ್ನು ಉಲ್ಲೇಖಿಸಿಲ್ಲ ಎಂದು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಗೋಪಾಲ ಪೂಜಾರಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ತೀರ್ಥಹಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯ 2021ರ ನವೆಂಬರ್‌ 27ರಂದು ಗೋಪಾಲ ಪೂಜಾರಿ ಅವರ ಮನವಿಯನ್ನು ಎತ್ತಿಹಿಡಿದು ನಾಗರಾಜ್‌ ಆಯ್ಕೆ ಅಸಿಂಧು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ನಾಗರಾಜ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನಾಗರಾಜ್‌ ಆಯ್ಕೆ ಅಸಿಂಧುಗೊಳಿಸಿದ್ದು ಪರಾಜಿತ ಅಭ್ಯರ್ಥಿ ಗೋಪಾಲ ಪೂಜಾರಿ ಅವರನ್ನು ಸದಸ್ಯರನ್ನಾಗಿ ನೇಮಿಸುವಂತೆ ಆದೇಶ ನೀಡಿದೆ.

Leave A Reply

Your email address will not be published.

error: Content is protected !!