ಅಡಿಕೆ ತೋಟಕ್ಕೆ ಔಷಧ ಸಿಂಪಡಿಸುವಾಗ ಮರದಿಂದ ಬಿದ್ದು ಕಾರ್ಮಿಕ ಸಾವು !

0 0

ತೀರ್ಥಹಳ್ಳಿ : ಅಡಿಕೆ ಮರಗಳಿಗೆ ಹರಳು ಉದುರುವ ಸಮಸ್ಯೆಗೆ ಔಷಧ ಸಿಂಪಡಣೆ ಮಾಡುವಾಗ ಮರದಿಂದ ಬಿದ್ದು ಕೃಷಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ತಾಲೂಕಿನ ಹಾರೋಗುಳಿಗೆ ಸಮೀಪದ ಅಂದಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸಸಿತೋಟ ಗ್ರಾಮದ ಉದಯ್ (47) ಮೃತಪಟ್ಟ ದುರ್ಧೈವಿ.
ಮೃತ ಉದಯ್ ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದು, ಜೆಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಠಾಣೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.

error: Content is protected !!