ತೀರ್ಥಹಳ್ಳಿ: ತೀರ್ಥಹಳ್ಳಿ – ಕೊಪ್ಪ ರಾಷ್ಟ್ರೀಯ ಹೆದ್ದಾರಿ ಮಾರ್ಗದ ನಡುವೆ ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, ಇಬ್ಬರು ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ತೀರ್ಥಹಳ್ಳಿ ಮತ್ತು ಕೊಪ್ಪ ಮಾರ್ಗದ ದೇವಂಗಿ ವಾಟಗಾರು ಬಳಿಯಲ್ಲಿ ಮಾರುತಿ ಸ್ವಿಫ್ಟ್ ಕಾರು ಹಾಗೂ ಫಿಗೋ ಕಾರಿನ ನಡುವೆ ಈ ಭೀಕರ ಅಪಘಾತ ನಡೆದಿದೆ.
ಮೃತರನ್ನು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಡಾಕಪ್ಪಗೌಡ (70) ಹಾಗೂ ಶ್ರೀನಿವಾಸ್ ಗೌಡ ಶಿರೂರು(72) ಎಂದು ಗುರುತಿಸಲಾಗಿದೆ.
ಶ್ರೇಯಸ್ ಸೊಪ್ಪುಗುಡ್ಡೆ ಎಂಬುವವರಿಗೆ ಗಂಭೀರಗಾಯವಾಗಿದ್ದು ಮತ್ತೊಂದು ಕಾರಿನಲ್ಲಿದ್ದಂತ ಮೂವರು ಸಹ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.