ತೀರ್ಥಹಳ್ಳಿ : ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ತೀರ್ಥಹಳ್ಳಿ ಮಾಜಿ ಶಾಸಕ, ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ರವರಿಗೆ ಪತ್ರದ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.
ಪರಾಜಿತರಾದರು ಪಕ್ಷಕ್ಕೆ ಕೆಲಸ ನಿರ್ವಹಿಸಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ ಡಿಕೆಶಿ, ಮುಂಬರುವ ದಿನಗಳಲ್ಲಿ ಬರುವ ಚುನಾವಣೆಗಳಿಗೆ ಶ್ರಮ ವಹಿಸುವಂತೆ ಮನವಿ ಮಾಡಿಕೊಂಡು, ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸಂಘಟನೆಗೆ ಕ್ರಮ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಡಿಕೆಶಿ ಪಕ್ಷ ಸಂಘಟನೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿ ಕಾರ್ಯನಿರ್ವಹಿಸುವಂತೆಯೂ ಕಿಮ್ಮನೆಗೆ ಬರೆದ ಪತ್ರದಲ್ಲಿ ಡಿಕೆಶಿ ವಿನಂತಿಸಿಕೊಂಡಿದ್ದಾರೆ.